

ತುಮಕೂರು: ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಡಾ.ಜಿ.ಪರಮೇಶ್ವರ ಚಾಲನೆ ನೀಡಿದ್ದು ರಾಜ್ಯದೆಲ್ಲೆಡೆಯಿಂದ 10 ಸಾವಿರ ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದಿರುವ ಪುರಷ ಹಾಗೂ ಮಹಿಳೆಯರ ಸ್ಪರ್ಧಾಳುಗಳಿಗೆ ಸಾರಿಗೆ, ವಸತಿ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.
ಎಲ್ಲಾ ಸ್ಪರ್ಧಿಗಳಿಗೂ ತುಮಕೂರಿನಲ್ಲಿ ರುಚಿ-ಶುಚಿಯಾದ ಊಟೋಪಹಾರ ವ್ಯವಸ್ಥೆ ಮಾಡಲಾಗಿದೆ. 6500 ಪುರಷರು ಹಾಗೂ 3500 ಮಹಿಳಾ ನೌಕರರು ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸಾಮರ್ಥ್ಯ ತೋರಲಿದ್ದಾರೆ.