

ತುಮಕೂರು: ಬೆವಿಕಂ ಗ್ರಾಮೀಣ ಉಪವಿಭಾಗ-1 ಮತ್ತು 2ಕ್ಕೆ ಸಂಬಂಧಿಸಿದಂತೆ ಜ.18ರಂದು ಮಧ್ಯಾಹ್ನ 3ಕ್ಕೆ ಗ್ರಾಹಕರ ಸಂವಾದ ಸಭೆ ಏರ್ಪಡಿಸಲಾಗಿದೆ.
ನಗರದ ಹೊರಪೇಟೆ ವೃತ್ತದಲ್ಲಿರುವ ಆಯಾ ಕಚೇರಿಗಳಲ್ಲಿ ಗ್ರಾಹಕರ ಸಂವಾದ ಸಭೆ ನಡೆಯಲಿದ್ದು, ಗ್ರಾಮೀಣ ಉಪವಿಭಾಗ-1ಕ್ಕೆ ಸಂಬಂಧಿಸಿದಂತೆ ಕೋರಾ, ಸಿಟಿ ಕೆರೆ, ಬೆಳ್ಳಾವಿ ಶಾಖಾ ವ್ಯಾಪ್ತಿಗೆ ಬರುವ ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು ಹಾಗೂ ಗ್ರಾಮೀಣ ಉಪವಿಭಾಗ-2ಕ್ಕೆ ಸಂಬಂಧಿಸಿದಂತೆ ಹೆಬ್ಬೂರು, ಗೂಳೂರು, ಸಿದ್ದಾರ್ಥನಗರ ಶಾಖೆಗಳ ವ್ಯಾಪ್ತಿಗೆ ಬರುವ ಭೀಮಸಂದ್ರ ನಗರ ಹಾಗೂ ಹೆಗ್ಗೆರೆ, ಮಲ್ಲಸಂದ್ರ, ದೊಡ್ಡನಾರವಂಗಲ, ಗೂಳೂರು, ಹೆತ್ತೇನಹಳ್ಳಿ, ಹೊಳಕಲ್, ನಾಗವಲ್ಲಿ, ಕಣಕುಪ್ಪೆ, ಗಂಗೋನಹಳ್ಳಿ, ಅರಿಯೂರು, ಹೆಬ್ಬೂರು, ಗಳಿಗೇನಹಳ್ಳಿ, ಬಳ್ಳಗೆರೆ, ನಿಡುವಳಲು, ಸಿರಿವರ ಗ್ರಾಮ ಪಂಚಾಯತಿಗಳ ಹೆಚ್ಟಿ ಮತ್ತು ಎಲ್ಟಿ ಗ್ರಾಹಕರು ಸಭೆಗೆ ಹಾಜರಾಗಿ ಸೂಕ್ತ ಸಲಹೆ, ದೂರುಗಳಿದ್ದಲ್ಲಿ ಪರಿಹರಿಸಿಕೊಳ್ಳಬಹುದು.