ಸರ್ಕಾರಿ ಶಾಲೆ ಉಳಿವು ಹಾಗೂ ಆರೋಗ್ಯ ಜಾಗೃತಿಯ ಪೆಡಲ್ ಫಾರ್ ಪರ್ಪಸ್ `ಸೈಕ್ಲೋಥಾನ್' ಯಶಸ್ವಿ

CYC
Published on

ತುಮಕೂರು: ಸರ್ಕಾರಿ ಶಾಲೆಗಳ ಸುಧಾರಣೆಗೆ ಎಲ್ಲರ ಗಮನ ಸೆಳೆಯುವ ಹಾಗೂ ಜನರಲ್ಲಿ ಆರೋಗ್ಯದ ಅರಿವು ಮೂಡಿಸುವ ಸಲುವಾಗಿ ಭಾನುವಾರ ನಡೆದ ಸೈಕ್ಲೋಥಾನ್- ಪೆಡಲ್ ಫಾರ್ ಪರ್ಪಸ್ ಯಶಸ್ವಿಯಾಗಿ ನೆರವೇರಿತು.

ಸೈಕಲ್ ವರ್ಲ್ಡ್ ತುಮಕೂರು, ಸಬ್ಲೈಮ್ ಕ್ಯಾಂಪ್ಸ್, ಯಾನ ಬೈಕ್ಸ್ ಮತ್ತು ತುಮಕೂರು ಸ್ಮಾರ್ಡ್ಸಿಟಿ ಲಿ., ತಂಡಗಳ ಸಹಯೋಗದೊಂದಿಗೆ ಸಹಕಾರ್ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಭಾನುವಾರ ಬಳಗ್ಗೆ 6.30ಕ್ಕೆ ನಗರದ ಬಿಜಿಎಸ್ ವೃತ್ತದಿಂದ ಆರಂಭವಾದ ಸೈಕ್ಲೋಥಾನ್ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿರುವ ನಾಮದಚಿಲುಮೆ ತಲುಪಿ ಬೆಳಗುಂಬದ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಕೊನೆಗೊಂಡಿತು.

ಬಾಲಕ, ಬಾಲಕಿಯರಿಂದ ಹಿಡಿದು ವೃದ್ಧರವರೆಗೆ 100ಕ್ಕೂ ಹೆಚ್ಚು ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದು, ಗಮನವನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಸಹಕಾರ್ ಸಂಸ್ಥೆಯ ಅಧ್ಯಕ್ಷ ಅಕ್ಷಯ್ ಭಟ್ ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net