

ತುಮಕೂರು: ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನ ಟ್ರಾಮ ಕೇರ್ ಸೆಂಟರ್‌ಗೆ ತಜ್ಞ ವೈದ್ಯರು ಮತ್ತು ಅಪಘಾತ ಚಿಕಿತ್ಸಾ ವೈದ್ಯರು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ತಜ್ಞರು, ವೈದ್ಯಾಧಿಕಾರಿಗಳು ಸಂಬAಧಿಸಿದ ಅಗತ್ಯ ಅರ್ಜಿ ಮತ್ತು ಮೂಲ ದಾಖಲೆಗಳೊಂದಿಗೆ ಜಿಲ್ಲಾ ಶಸ್ತç ಚಿಕಿತ್ಸಕರ ಕಚೇರಿ, ಜಿಲ್ಲಾ ಆಸ್ಪತ್ರೆ, ತುಮಕೂರು. ಇಲ್ಲಿ ಜುಲೈ 14ರಂದು ಬೆಳಗ್ಗೆ 10.30ಕ್ಕೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ನ್ಯೂರೋ ಸರ್ಜನ್, ರೇಡಿಯೋಲಜಿಸ್ಟ್, ಅನಸ್‌ಥೀಸಿಯಾಲಜಿಸ್ಟ್, ಆರ್ಥೋಪಿಡಿಕ್ ಸರ್ಜನ್, ಜನರಲ್ ಸರ್ಜನ್, ಅಪಘಾತ ಚಿಕಿತ್ಸಾ ವೈದ್ಯರುಗಳ ನೇಮಕಾತಿಗಾಗಿ ನೇರ ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾಸ್ಪತ್ರೆ ಜಿಲ್ಲಾಶಸ್ತçಚಿಕಿತ್ಸಕರನ್ನು ಸಂಪರ್ಕಿಸಬಹುದು.