

ತುಮಕೂರು: ತುರುವೇಕೆರೆ ತಾಲೂಕಿನ ಕ್ಯಾಮಸಂದ್ರ ಗ್ರಾಮದ ರೈತ ಜಯರಾಮ್ ಎಂಬುವವರ ಜಮೀನಿನ ಪಂಪ್‌ಹೌಸ್‌ನಲ್ಲಿ ಚಿರತೆಯೊಂದು ಅಡಗಿ ಕುಳಿತು ಭಯ ಮೂಡಿಸಿರುವ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ಕೊಳವೆಬಾವಿ ಮೋಟರ್ ಚಾಲನೆಗೊಳಿಸಲು ಪಂಪ್‌ಹೌಸ್‌ಗೆ ತೆರಳಿದ್ದಾಗ ಕತ್ತಲೆಯಲ್ಲಿಯೇ ಚಿರತೆಯ ಕಾಲು ಮುಟ್ಟಿದಾಗ ಚಿರತೆಯ ಇರುವಿಕೆ ಗೊತ್ತಾಗಿದೆ. ಎಚ್ಚೆತ್ತ ರೈತ ಕೂಡಲೇ ಬಾಗಿಲು ಹಾಕಿ ಅಲ್ಲಿಂದ ಕಾಲ್ಕಿತ್ತು ಅಪಾಯ ತಪ್ಪಿಸಿಕೊಂಡಿದ್ದಾರೆ.
ಸ್ಥಳೀಯರ ನೆರವಿನಿಂದ ಪಂಪ್‌ಹೌಸ್‌ನಲ್ಲಿ ಚಿಕಿತೆ ಇರುವುದನ್ನು ದೃಢಪಡಿಸಿಕೊಂಡು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಅಧಿಕಾರಿಗಳು ಚಿರತೆಯನ್ನು ರಕ್ಷಿಸಿ ಕಾಡಿಗಟ್ಟಿದ್ದಾರೆ.