ಹುಷಾರ್…ಮಧುಗಿರಿಯಲ್ಲಿ ಹೆಚ್ಚುತ್ತಿದೆ ಖೋಟಾ ನೋಟ್ ದಂಧೆ…!

NOTE
Published on

ಮಧುಗಿರಿ : ಪಟ್ಟಣದಲ್ಲಿ ಖೋಟಾ ನೋಟ್ ಚಲಾವಣೆ ಶಂಕೆ ವ್ಯಕ್ತವಾಗುತ್ತಿದ್ದು, ಮೊಬೈಲ್ ಅಂಗಡಿಯೊಂದರಲ್ಲಿ ಖೋಟ ನೋಟ್ ಕೊಟ್ಟು ಮೊಬೈಲ್ ಕೊಳ್ಳಲು ಯತ್ನಿಸಿರುವ ಘಟನೆ ತಡವಾಗಿ ಬಳಕೆಗೆ ಬಂದಿದೆ

ಪಟ್ಟಣದ ಡೂಂ ವೃತ್ತದ ಸಮೀಪದಲ್ಲಿರುವ ಮೊಬೈಲ್ ಅಂಗಡಿ ಒಂದಕ್ಕೆ ಸೋಮವಾರ ಮೂವರು ಯುವಕರು ಮೊಬೈಲ್ ಖರೀದಿಸಲೆಂದು ತೆರಳಿದ್ದು, ಈ ಸಂದರ್ಭದಲ್ಲಿ ಅಂಗಡಿ ಮಾಲೀಕರೊಂದಿಗೆ ಮೊಬೈಲ್ ಒಂದನ್ನು ಬೆಲೆ ಕೇಳಿದ್ದಾರೆ. ಮೊಬೈಲ್ ಬೆಲೆ ರೂ.10,500 ಎಂದು ಹೇಳಿದಾಗ ಐನೂರು ರೂಗಳು ಕಡಿಮೆ ಇದೆ ಮತ್ತೆ ಬರುತ್ತೇವೆ ಎಂದು ಹೇಳಿ ವಾಪಸ್ ಹೋಗಿದ್ದಾರೆ.

10 ನಿಮಿಷಗಳ ನಂತರ ಅಂಗಡಿಗೆ ಬಂದು 10,500 ಗಳನ್ನು ಕೊಟ್ಟು ಮೊಬೈಲ್ ಖರೀದಿಸಿದ್ದಾರೆ. ಈ ಸಂದರ್ಭದಲ್ಲಿ ಅಂಗಡಿ ಮಾಲೀಕನಿಗೆ ಅನುಮಾನ ಬಂದು ಇವು ಅಸಲಿ ನೋಟುಗಳಂತಿಲ್ಲ ಖೋಟ ನೋಟುಗಳ ಹಾಗಿದೆ ನಿಮಗೆ ಎಲ್ಲಿ ಸಿಕ್ಕವು ಎಂದು ಪ್ರಶ್ನಿಸಿದಾಗ, ನಾವು ಈಗ ತಾನೇ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದು, ಇವು ಖೋಟಾ ನೋಟಲ್ಲ ಅಸಲಿ ನೋಟ್ ಎಂದು ವಾದಿಸಿದ್ದಾರೆ.

ಅನುಮಾನ ಗೊಂಡ ಮೊಬೈಲ್ ಅಂಗಡಿ ಮಾಲೀಕ ನೋಟುಗಳನ್ನು ನಿಖರವಾಗಿ ಪರಿಶೀಲಿಸಿದಾಗ ಇವು ಖೋಟಾ ನೋಟುಗಳು ಎಂಬುದಾಗಿ ಖಾತರಿಯಾಗಿದ್ದು ನಿಮಗೆ ಎಲ್ಲಿ ಸಿಕ್ಕವು ಎಂದು ಕೇಳಿದಾಗ ಮೂವರು ಯುವಕರು ಗಾಬರಿಗೊಂಡು ಅಂಗಡಿಯಿಂದ ಕಾಲ್ ಕಿತ್ತಿದ್ದಾರೆ. ಇದರ ಬಗ್ಗೆ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net