ಕನ್ನಡ ರಾಜ್ಯೋತ್ಸವಕ್ಕೆ ಕಸಾಪ ಜಿಲ್ಲಾಧ್ಯಕ್ಷರಿಗೂ ಆಹ್ವಾನಿವಿಲ್ಲ; ಲೋಗೋ, ಘೋಷವಾಕ್ಯಕ್ಕೆ ಕೊಕ್

KKKKK
Published on

ತುಮಕೂರು: ಕನ್ನಡ ರಾಜ್ಯೋತ್ಸವ ಆಚರಿಸುವ ಜವಬ್ಧಾರಿ ಹೊತ್ತಿರುವ ಜಿಲ್ಲಾಡಳಿತ ಎಡವಟ್ಟುಗಳು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಆಹ್ವಾನ ಪತ್ರಿಕೆಯಲ್ಲಿ ಸರ್ಕಾರದ ಕಾರ್ಯಕ್ರಮವಾದರೂ ಕರ್ನಾಟಕ ಸಂಭ್ರಮದ ಲೋಗೋ ಹಾಕಿಲ್ಲ, ಘೋಷವಾಕ್ಯ `ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ'ಕ್ಕೂ ಜಾಗ ನೀಡಿಲ್ಲ.

ಇಷ್ಟೇಲ್ಲಾ ಲೋಪಗಳ ನಡುವೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರ ಹೆಸರನ್ನು ಆಹ್ವಾನ ಪತ್ರಿಕೆಯಿಂದ ಕೈಬಿಟ್ಟಿರುವಜಿಲ್ಲಾಡಳಿತದ ಏಕಪಕ್ಷೀಯ ನಡೆಯ ಬಗ್ಗೆ ಜಿಲ್ಲೆಯ ಸಾಹಿತ್ಯ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net