ಅಮಲಾಪುರ ಗ್ರಾಮಕ್ಕೆ ಜಿಲ್ಲಾ ನ್ಯಾಯಾಲಯ ಶಿಫ್ಟ್​

Court_TMk
Published on

ತುಮಕೂರು: ನಗರದಲ್ಲಿ ಕೋರ್ಟ್​ಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರಿಗೆ ತೊಂದರೆ ತಪ್ಪಿಸಿ ಸುಗಮ ಕಲಾಪ ನಡೆಸಲು ಸಾಧ್ಯವಾಗುವಂತೆ ನೂತನವಾಗಿ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಜಮೀನು ನೀಡಬೇಕು ಎಂಬ ವಕೀಲರ ಬಹುದಿನದ ಬೇಡಿಕೆಗೆ ಮನ್ನಣೆ ಸಿಕ್ಕಿದೆ.

ತುಮಕೂರು ತಾಲೂಕು ಕಸಬಾ ಉತ್ತರ ಹೋಬಳಿ ಅಮಲಾಪುರ ಗ್ರಾಮದ ಸ.ನಂ. 31 ರಲ್ಲಿ ನ್ಯಾಯಾಂಗ ಇಲಾಖೆಗೆ ರಾಜ್ಯ ಸರ್ಕಾರದ ಜಮೀನು ಮಂಜೂರು ಮಾಡಿದೆ. ಜಮೀನು ನೀಡಲು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಮೀನಾಮೇಷ ಎಣಿಸಿದ್ದನ್ನು ಖಂಡಿಸಿ ಜಿಲ್ಲಾ ವಕೀಲರ ಸಂ ಉಪಲೋಕಾಯನ್ಯಾಯಮೂರ್ತಿಗಳಿಗೂ ದೂರು ನೀಡಿತ್ತು.

ವಕೀಲರು ಪ್ರತಿಭಟನೆಗೂ ಮುಂದಾಗಿದ್ದರಿಂದ ಜಿಲ್ಲಾಧಿಕಾರಿ ಅಮಲಾಪುರ ಬಳಿ 15 ಎಕರೆ ಜಮೀನು ನ್ಯಾಯಾಂಗ ಇಲಾಖೆಗೆ ನೀಡಲು ಸರ್ಕಾರಕ್ಕೆ ಶಿಾರಸು ಮಾಡಿದ್ದರು. ಜಿಲ್ಲಾಡಳಿತದ ಶಿಾರಸು ಆಧರಿಸಿ ನ್ಯಾಯಾಂಗ ಇಲಾಖೆಗೆ ಸರ್ಕಾರ ಜಮೀನು ಮಂಜೂರು ಮಾಡಿದ್ದು ಶ್ರೀದಲ್ಲಿಯೇ ನ್ಯಾಯಾಲಯ ಸಂರ್ಕಿಣ, ವಸತಿ ಗೃಹಗಳು ಹೊಸ ಜಾಗಕ್ಕೆ ಸ್ಥಳಾಂತರಗೊಳ್ಳಲಿವೆ.

ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಪ್ರತಿನಿತ್ಯ ಕೋರ್ಟ್​ಗೆ ಬರುವ ವಕೀಲರು, ಕಕ್ಷಿದಾರರು ಹಾಗೂ ಸಾರ್ವಜನಿಕರಿಗೆ ಪಾರ್ಕಿಂಗ್​ ಸಮಸ್ಯೆ ಸೇರಿದಂತೆ ಇನ್ನಿತರೆ ಸಮಸ್ಯೆಗಳು ಉಂಟಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಇಲಾಖೆಗೆ ಜಮೀನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.

ಲಭ್ಯವಿರುವ 15 ಎಕರೆ ಜಮೀನು ಬಳಸಿಕೊಂಡು 5 ಎಕರೆ ಪ್ರದೇಶದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ, 5 ಎಕರೆ ಜಮೀನು ಬಳಸಿಕೊಂಡು ನ್ಯಾಯಾಂಗ ಇಲಾಖೆ ಅಧಿಕಾರಿಗಳ ವಸತಿ ಸಂರ್ಕಿಣ ನಿರ್ಮಾಣಕ್ಕೆ ಬಳಸಿಕೊಳ್ಳಲು ಸರ್ಕಾರ ನಿರ್ದೇಶಿಸಿದೆ. ಪ್ರಸ್ತುತ ಲಭ್ಯವಿರುವ ಜಿಲ್ಲಾ ನ್ಯಾಯಾಲಯದ ಸಂರ್ಕಿಣದ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲು ಸೂಚಿಸಿದೆ.

ಅಮಾಲಪುರ ಸುತ್ತಮುತ್ತ ಕಲ್ಲು ಗಣಿಗಾರಿಕೆ ಕೂಡ ಮಿತಿ ಮೀರಿ ನಡೆಯುತ್ತಿದ್ದು ನ್ಯಾಯಾಲಯ ಸಂರ್ಕಿಣ ಅಲ್ಲಿಗೆ ಸ್ಥಳಾಂತರವಾದರೆ ಅಕ್ರಮಗಳಿಗೆ ಕಡಿವಾಣ ಬೀಳಬಹುದು ಎಂಬ ಆಶಾಭಾವನೆ ಅಲ್ಲಿನ ನಾಗರೀಕರಲ್ಲಿದೆ. ಇದೇ ಕ್ರಷರ್​ ಲಾಬಿಗೆ ಮಣಿದಿದ್ದ ಜಿಲ್ಲಾಡಳಿತ ನ್ಯಾಯಾಂಗ ಇಲಾಖೆಗೆ ಸಕಾಲದಲ್ಲಿ ಜಮೀನು ನೀಡಲು ಮೀನಾಮೇಷ ಎಣಿಸಿತ್ತು ಎಂಬ ಆರೋಪ ಕೂಡ ಇತ್ತು.

ಎಂಎಸ್​ಎಂಇಗೆ ಮೀಸಲಿಟ್ಟಿದ್ದ ಜಾಗ.. ಕೊರಟಗೆರೆ ರಸ್ತೆ ಅಮಲಾಪುರ ಬಳಿ ಕೇಂದ್ರ ಸರ್ಕಾರದ ಸೂಕ್ಷ$್ಮ, ಸಣ್ಣ ಹಾಗೂ ಮಧ್ಯಮ ಟೆಕ್ನಾಲಜಿ ಸೆಂಟರ್​(ಎಂಎಸ್​ಎಂಇ) ಸ್ಥಾಪಿಸಲು 15 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಆದರೆ, ಯೋಜನೆಯನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಜಮೀನನ್ನು ಜಿಲ್ಲಾಡಳಿತಕ್ಕೆ ಹಿಂತಿರುಗಿಸಲಾಗಿತ್ತು. ಈ ಭೂಮಿಯ ಜತೆಗೆ ವಿಜ್ಞಾನ ಕೇಂದ್ರ ನಿರ್ಮಾಣಕ್ಕೆ ಮೀಸಲಿಟ್ಟಿದ್ದ 5 ಎಕರೆ ಒಟ್ಟು 20 ಎಕರೆ ಜಮೀನನ್ನು ನ್ಯಾಯಾಂಗ ಇಲಾಖೆಗೆ ನೀಡಬೇಕು ಎಂಬುದು ವಕೀಲರ ಬೇಡಿಕೆಯಾಗಿತ್ತು. ಆದರೆ, ಜಿಲ್ಲಾಡಳಿತ ಕೇವಲ 10 ಎಕರೆ ಜಮೀನು ನೀಡಲಾಗುವುದು ಎಂದು ಹಠ ಮಾಡಿದ್ದ ಜಾಗದ ವಿವಾದ ತೀವ್ರ ಸ್ವರೂಪ ಪಡೆದಿದ್ದು ತುಮಕೂರು ಜಿಲ್ಲಾ ವಕೀಲರು ಕೋರ್ಟ್​ ಕಲಾಪದಿಂದ ದೂರವಿದ್ದು ಪ್ರತಿಭಟನೆ ವ್ಯಕ್ತಪಡಿಸಿದ್ದರು. ಕೊನೆಗೂ ಹಠಬಿಟ್ಟ ಜಿಲ್ಲಾಡಳಿತ 15 ಎಕರೆ ಭೂಮಿಯನ್ನು ನೀಡಲು ಒಪ್ಪಿಗೆ ಸೂಚಿಸಿರುವುದು ಹರ್ಷ ಮೂಡಿಸಿದೆ.

ಜಿಲ್ಲಾ ನ್ಯಾಯಾಲಯ ಆವರಣದಲ್ಲಿ 21ಕೋರ್ಟ್​! ರಾಜ್ಯದ ಪ್ರತಿಷ್ಠಿತ ನ್ಯಾಯಾಲಯಗಳ ಪೈಕಿ ತುಮಕೂರು ನ್ಯಾಯಾಲಯಕ್ಕೂ ಸ್ಥಾನವಿದೆ, ಜಿಲ್ಲಾ ವಕೀಲರ ಸಂ ರಾಜ್ಯದಲ್ಲಿ ನತೆಯಿರುವ ಪ್ರತಿಷ್ಠಿತ ಸಂ ಎನ್ನಿಸಿಕೊಂಡಿದೆ. ತುಮಕೂರು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ಮಟ್ಟದ 21ಕೋರ್ಟ್​ಗಳಿದ್ದು ಪ್ರತಿದಿನ 5 ಸಾವಿರಕ್ಕೂ ಹೆಚ್ಚು ಪದಾರರು, ಸಾರ್ವಜನಿಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಜಿಲ್ಲಾ ನ್ಯಾಯಾಲಯ, ಹಿರಿಯ ಸಿವಿಲ್​ ನ್ಯಾಯಾಲ ಹಾಗೂ ಕಿರಿಯ ಸಿವಿಲ್​ ನ್ಯಾಯಾಲಯಗಳ ಮೂಲಕ ಪ್ರತಿದಿನ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇಲ್ಲಿ ದಾಖಲಾಗುತ್ತಿವೆ. ಸ್ಥಳಾವಕಾಶ ಕೊರತೆಯಿಂದ ಕೋರ್ಟ್​ ಕಲಾಪಗಳನ್ನು ನಡೆಸುವುದು ನ್ಯಾಯಾಧೀಶಕರಿಗೆ ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗುವಂತೆ ಈಗಿರುವ ಕಟ್ಟಡ, ಜಮೀನು ಜಿಲ್ಲಾಡಳಿತದ ವಶಕ್ಕೆ ಪಡೆದು ಅಗತ್ಯವಿರುವ ಭೂಮಿ ನೀಡುವಂತೆ ವಕೀಲರು ಹೋರಾಟ ಆರಂಭಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net