ಜಿಲ್ಲೆಯಲ್ಲಿ ಹಕ್ಕಿಜ್ವರ ಭೀತಿ; ವಲಸೆ ಹಕ್ಕಿಗಳ ಮೇಲೆ ನಿಗಾ

birdflue
Published on

ತುಮಕೂರು: ನೆರೆಯ ಚಿಕ್ಕಬಳ್ಳಾಪುರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಹಕ್ಕಿಜ್ವರ(ಆಜ್ಟಿಛ ಊ್ಝ್ಠ) ದೃಢಪಟ್ಟಿರುವ ಬಗ್ಗೆ ವರದಿಯಾಗಿದ್ದು, ತುಮಕೂರು ಜಿಲ್ಲೆಯಲ್ಲಿಯೂ ಹಕ್ಕಿಜ್ವರದ ಭೀತಿ ಶುರುವಾಗಿದೆ ಆದರೆ, ಈವರೆಗೂ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಖಚಿತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿ ಜ್ವರದ ರೋಗೋದ್ರೇಕವಿರುವುದರಿಂದ ಶಿರಾ ತಾಲೂಕು ಕಗ್ಗಲಡು ಸೇರಿದಂತೆ ಜಿಲ್ಲೆಯಲ್ಲಿ ವಲಸೆ ಪಕ್ಷಿಗಳು ಬರುವ ಸ್ಥಳದಲ್ಲಿ ನಿಗಾವಹಿಸಲಾಗಿದೆ. ಕೋಳಿಗಳು ಸತ್ತರೆ ಪಶುಪಾಲನಾ ಇಲಾಖೆ ಗಮನಕ್ಕೆ ತರಬೇಕು ಎಂದು ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಹಳ್ಳಿಗಳಲ್ಲಿ ಕೋಳಿಗಳು ಸತ್ತರೆ ತಕ್ಷಣವೇ ಪ್ರಯೋಗಾಲಯಕ್ಕೆ ಕಳುಹಿಸಲು ಪಶುಪಾಲನಾ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ.

ಜಿಲ್ಲೆಯಲ್ಲಿ ಹಕ್ಕಿಜ್ವರ ನಿಯಂತ್ರಣ ಮಾಡಲು ಜಿಲ್ಲಾ ಮಟ್ಟದಲ್ಲಿ ತಾಂತ್ರಿಕ ಅಧಿಕಾರಿ ಡಾ.ನಾಗಮಣಿ ನೋಡಲ್​ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ತಾಲೂಕು ಮಟ್ಟದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಒಬ್ಬ ಪಶುವೈದ್ಯ, ಇಬ್ಬರು ತಾಂತ್ರಿಕ ಸಿಬ್ಬಂದಿ ಹಾಗೂ ಇಬ್ಬರು ಡಿ ದರ್ಜೆ ನೌಕರರನ್ನೊಳಗೊಂಡ 64 ತಂಡ ರಚಿಸಲಾಗಿದೆ.

ಜಿಲ್ಲೆಯಲ್ಲಿ ಹಕ್ಕಿಜ್ವರದ ರೋಗೋದ್ರೇಕ ಕಂಡು ಬಂದರೆ ಅವಶ್ಯಕತೆಯಿರುವ ಪಿಪಿಇ ಕಿಟ್​, ರಾಸಾಯನಿಕಗಳು ಲಭ್ಯವಿದ್ದು, ರೋಗವನ್ನು ನಿಯಂತ್ರಿಸಲು ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರು ಕೋಳಿ ಶೀತಜ್ವರದ ಬಗ್ಗೆ ಆತಂಕ ಪಡಬೇಕಿಲ್ಲ. ಚೆನ್ನಾಗಿ ಬೇಯಿಸಿದ ಕೋಳಿ ಮಾಂಸ ್ನ ಸೇವಿಸಬಹುದು ಎಂದು ಎಂದು ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಜಿ.ಗಿರೀಶ್​ ಬಾಬುರೆಡ್ಡಿ ತಿಳಿಸಿದ್ದಾರೆ.

ಕೋಳಿಗಳು ಅಸ್ವಾಭಾವಿಕವಾಗಿ ಮರಣ ಹೊಂದಿದರೆ 24/7 ಕಾರ್ಯನಿರ್ವಹಿಸುವ ಕಾಲ್​ ಸೆಂಟರ್​ 7304975519 ಅಥವಾ 0816-2213400ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಹಕ್ಕಿ ಜ್ವರ ಅಡಜಿಚ್ಞ ಜ್ಞ್ಛ್ಝಿ್ಠಛ್ಞ್ಢಿಚ (ಏ51) ಎಂಬ ವೈರಸ್​ನಿಂದ ಕೋಳಿ, ಬಾತು ಕೋಳಿ, ಪಕ್ಷಿಗಳಲ್ಲಿ ಬರುವಂತಹ ಮಾರಸ್ತಿಕ ಂತಿಕ ಖಾಯಿಲೆಯಾಗಿದೆ. ರೋಗಗ್ರಸ್ಥ ಕೋಳಿಗಳು ಆರೋಗ್ಯವಂತ ಕೋಳಿಗಳಿಗೆ ಗಂಟಲು ದ್ರವದ ಮೂಲಕ ಮತ್ತು ಹಿಕ್ಕೆಯಿಂದ ವೈರಸ್ಸನ್ನು ಹರಡುತ್ತದೆ. ಇಲ್ಲಿಯವರೆಗೂ ಆದರೆಮ ಭಾರತದಲ್ಲಿ ಈ ಖಾಯಿಲೆ ಮನುಷ್ಯರಲ್ಲಿ ಕಂಡು ಬಂದಿರುವ ಉದಾಹರಣೆಗಳಿಲ್ಲ. ಜಿಲ್ಲೆಯಲ್ಲಿ 20ನೇ ಜಾನುವಾರು ಗಣತಿ ಪ್ರಕಾರ 40,28,178 ಕೋಳಿ, 687 ಕೋಳಿ ಫಾರಂಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net