

ತುಮಕೂರು: ದೇವರಾಯನದುರ್ಗದ ಕರಿಗಿರಿ ಸುಕ್ಷೇತ್ರದ ಶ್ರೀಯೋಗ ಮತ್ತು ಭೋಗ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಆ.19 ರಿಂದ ಸೆ.10ರ ವರೆಗೆ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ.
ಆ.19ರಂದು ಮೊದಲ ಶ್ರಾವಣ ಶನಿವಾರದಂದು ಸ್ವಾಮಿಗೆ ಅರಿಶಿನ ಅಲಂಕಾರ' ಆ.20ರಂದು ಭಾನುವಾರ `ಮುತ್ತಿನ ಕವಚ ಅಲಂಕಾರ' ಆ.26ರಂದು ಶನಿವಾರದಂದು ಶ್ರೀಗಂಧದ ಅಲಂಕಾರ' ಆ.27 ಭಾನುವಾರದಂದು 'ಚಿನ್ನದ ಕವಚ ಅಲಂಕಾರ' ಸೆ.2 ಶನಿವಾರದಂದು ಬೆಣ್ಣೆ ಅಲಂಕಾರ' ಸೆ.3 ಭಾನುವಾರ ವಜ್ರ ಕವಚ ಅಲಂಕಾರ' ಸೆ.9 ಶನಿವಾರದಂದು ವಿಶೇಷ ಹೂವಿನ ಅಲಂಕಾರ ಮತ್ತು ಅಂದು ಬೆಳಿಗ್ಗೆ 10:30ಕ್ಕೆ ಜಾನಪದ ನೃತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.
ಸೆ.10ರ ಭಾನುವಾರ ಬೆಳ್ಳಿಯ ಆಭರಣಗಳಿಂದ ಅಲಂಕಾರ ಸೇವೆ ಏರ್ಪಡಿಸಲಾಗಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.