

ತುಮಕೂರು: ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಸರ್ಕಾರಿ ಜಾಗದಲ್ಲಿ ನೂರಾರು ಲಾರಿಯಷ್ಟು ಮಣ್ಣನ್ನು ಲೂಟಿ ಮಾಡಿರುವುದು ಮತ್ತೆ ಬೆಳಕಿಗೆ ಬಂದಿದೆ. ಮಳೆ ಬಿಡುವ ಕೊಟ್ಟ ನಂತರ ಕಳೆದೊಂದು ವಾರದಿಂದ ಭೂಗಳ್ಳರು ಲವತ್ತಾದ ಮಣ್ಣನ್ನು ಅಕ್ರಮವಾಗಿ ಕದ್ದು ಸಾಗಿಸುತ್ತಿರುವುದು ಕಂಡುಬಂದಿದೆ.
ಅಯ್ಯನಪಾಳ್ಯ, ಜನಪನಹಳ್ಳಿ ತಾಂಡ್ಯ ಬಳಿಯ ನರಿಕಲ್ ಬೆಟ್ಟಕ್ಕೆ ಹೊಂದಿಕೊಂಡಿರುವ ಖಾಸಗಿ ಜಮೀನಿನ ಬಳಿಯಿರುವ ಅರಣ್ಯಪ್ರದೇಶದ ಜಾಗದಿಂದ ನೂರಾರು ಲೋಡು ಮಣ್ಣನ್ನು ಕದ್ದುಮುಚ್ಚಿ ಕೆಲವು ದಿನಗಳಿಂದ ಅಕ್ರಮವಾಗಿ ಸಾಗಿಸುತ್ತಿದ್ದರು ಕಂದಾಯ, ಪೊಲೀಸ್ ಅಧಿಕಾರಿಗಳು ಮೌನವಹಿಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಎಗ್ಗಿಲ್ಲದೆ ಸಾಗಿದ್ದ ಮಣ್ಣು ದಂಧೆ ಬಗ್ಗೆ ಹೈಕೋರ್ಟ್ ವಕೀಲ, ಸ್ಥಳಿಯ ನಿವಾಸಿ ರಮೇಶ್ ನಾಯಕ್ ಬುಧವಾರ ಜಿಲ್ಲಾಡಳಿತದ ಗಮನಕ್ಕೆ ತರುತ್ತಿದ್ದಂತೆ ಕಂದಾಯ ನಿರೀಕ್ಷಕ, ಪೊಲೀಸ್ ಅಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಿಬ್ಬಂದಿ ಬುಧವಾರ ಸ್ಥಳಕ್ಕೆ ದೌಡಾಯಿಸಿದ್ದು ಅಕ್ರಮ ಮಣ್ಣು ಸಾಗಾಣಿಕೆಗೆ ಬ್ರೇಕ್ ಹಾಕುವ ಶಾಸ ಮಾಡಿದ್ದಾರೆ. ಇಂತಹ ಅಕ್ರಮದಂಧೆಗೆ ಜಿಲ್ಲಾಡಳಿತ ಶಾಶ್ವತವಾಗಿ ಕಡಿವಾಣ ಹಾಕಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಅಕ್ರಮ ಮಣ್ಣು ಸಾಗಾಣೆ ಮಾಡುತ್ತಿರುವ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಆರ್ಐ. ವಿಐಗಳು, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಅಕ್ರಮವಾಗಿ ಮಣ್ಣು ದಂಧೆಯಲ್ಲಿ ಭಾಗಿಯಾಗಿರುವರ ವಿರುದ್ಧ ಎ್ಐಆರ್ ಮಾಡಲು ಸೂಚನೆ ನೀಡಲಾಗಿದೆ. ಕಠಿಣ ಕ್ರಮ ಕೈಗೊಳ್ಳಲಾಗುವುದು.ಸಿದ್ದೇಶ್ತಹಸೀಲ್ದಾರ್
ನರಿಕಲ್ ಬೆಟ್ಟದ ತಪ್ಪಲಿನಲ್ಲಿರುವ ಖಾಸಗಿ, ಗೋಮಾಳದ ಜಮೀನುಗಳಲ್ಲಿ ಹಗಲು ಹೊತ್ತೇ ಫಲವತ್ತಾದ ಮಣ್ಣನ್ನು ಸಾಗಿಸುಲಾಗುತ್ತಿದ್ದು ತಾಲೂಕುಡಳಿತದ ಗಮನಕ್ಕೆ ತರಲಾಗಿದೆ. ಕಂದಾಯ, ಅರಣ್ಯ ಇಲಾಖೆ ಅನುಮತಿ ಪಡೆಯದೆ ಮಣ್ಣನ್ನು ತೆಗೆಯಲಾಗುತ್ತಿದ್ದು ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಮೊತ್ತದ ನಷ್ಟ ಉಂಟುಮಾಡಿದ್ದಾರೆ.
ಎಲ್. ರಮೇಶ್ ನಾಯಕ್
ಹೈಕೋರ್ಟ್ ವಕೀಲರು