

ತುಮಕೂರು: ಜಿಲ್ಲೆಯಲ್ಲಿ ಟಿಸುವ ಜನನ, ಮರಣ ಮತ್ತು ನಿರ್ಜೀವ ಜನನ ಟನೆಗಳನ್ನು ಕೈಬಿಡದೆ, ನೋಂದಾಯಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಾಗರಿಕ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ವೀಡಿಯೋ ಸಂವಾದದ ಮೂಲಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಯಾ ತಾಲೂಕಿನ ನೋಂದಣಾಧಿಕಾರಿ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಶೇ.100ರಷ್ಟು ಪ್ರತಿಶತ ಗುರಿ ಸಾಧಿಸಬೇಕು ಎಂದರು.
ಸರ್ಕಾರದ ಸೂಚನೆಯಂತೆ ಎಲ್ಲ ನೋಂದಣಾಧಿಕಾರಿಗಳು ಡಿಜಿಟಲ್ ಕೀಗಳನ್ನು ನವೀಕರಿಸಿಕೊಂಡು ಜನನ, ಮರಣ ಪ್ರಮಾಣ ಪತ್ರಗಳನ್ನು ವಿತರಿಸಬೇಕು ಹಾಗೂ ಪ್ರತಿ ತಿಂಗಳು 5ರೊಳಗೆ ಪ್ರಗತಿಯ ವರದಿ ಕಳುಹಿಸಿಕೊಡಬೇಕು. ಜನನ, ಮರಣಗಳ ನೋಂದಣಿ ಅಧಿನಿಯಮ 1969ರ ಪ್ರಕರಣ 30(2)ರಂತೆ ಕ್ರಮ ವಹಿಸುವಂತೆ ಎಲ್ಲ ತಾಲೂಕಿನ ತಹಸೀಲ್ದಾರ್, ಆಯುಕ್ತರು, ಪೌರಾಯುಕ್ತ ಮತ್ತು ಮುಖ್ಯಾಧಿಕಾರಿಗೆ ಸೂಚಿಸಿದರು.
ಆಯಾ ತಹಸೀಲ್ದಾರ್ಗಳು ತಮ್ಮ ಹಂತದಲ್ಲಿ ಪ್ರತಿ ತಿಂಗಳಿಗೊಮ್ಮ ನಾಗರಿಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆ ನಡೆಸಬೇಕು. ಕಡ್ಡಾಯವಾಗಿ ಪಡಿತರ ಚೀಟಿ ಸಂಖ್ಯೆಯ ಲಭ್ಯತೆ ಬಗ್ಗೆ ಸತ್ಯಾಸತ್ಯತೆಯನ್ನು ಆಹಾರ ವಿತರಣಾ ತಂತ್ರಾಂಶದಲ್ಲಿ ಪರಿಶೀಲಿಸಿ, ಪಡಿತರ ಚೀಟಿ ಸಂಖ್ಯೆ, ಇಲ್ಲದಿದ್ದಲ್ಲಿ ಪಡಿತರ ಚೀಟಿ ಇಲ್ಲದಿರುವ ಬಗ್ಗೆ ದೃಢೀಕರಣ ಪಡೆದು ನೋಂದಾಯಿಸುವಂತೆ ಹೇಳಿದರು.
ಎಲ್ಲ ಜನನ, ಮರಣ ನೋಂದಣಿ ಹಾಗೂ ಉಪ ನೋಂದಣಿ ಕೇಂದ್ರಗಳಲ್ಲಿ ಅಟಲ್ ಜೀ ಜನಸ್ನೇಹಿ ಏಕರೂಪವಾಗಿ ಎ4 ಅಳತೆಯ 70 ಜಿಎಸ್ಎಂ ಈಟಿ ಹಾಳೆಯಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಮುದ್ರಿಸಿ ವಿತರಿಸುವಂತೆ ನಿರ್ದೇಶಿಸಿದರು.
ಆರೋಗ್ಯ ಸಂಸ್ಥೆಗಳಲ್ಲಿ ಟಿಸುವ ಮರಣ ಟನೆಗಳ, ಮರಣ ಕಾರಣವನ್ನು ವೈದ್ಯಾಧಿಕಾರಿಗಳು ಸ್ಪಷ್ಟವಾಗಿ ಬಿಡಿ ಬಿಡಿಯಾಗಿ ನಮೂನೆ 4ರಲ್ಲಿ ಬರೆಯಬೇಕು ಹಾಗೂ ನಿಗಧಿತ ಸಮಯದಲ್ಲಿ ನೇರವಾಗಿ ಜನನ ಮರಣಗಳ ಮುಖ್ಯ ನೋಂದಣಾಧಿಕಾರಿ ಕಚೇರಿಗೆ ಕಳುಹಿಸಿಕೊಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.