

ತುಮಕೂರು: ತಾಲೂಕಿನ ಬೆಳಧರದಲ್ಲಿ ಯುವಕನ್ನು ಸೋಮವಾರ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ಕೊಲೆಗೈದಿರುವ ಘಟನೆ ನಡೆದಿದ್ದು ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಅಹೋಬಲ ಅಗ್ರಹಾರ ಗ್ರಾಮದ ಹನುಮಂತರಾಜು(25) ಮೃತ.ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕುರಿಗಾಹಿಗಳು ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಭೇಟಿ ನೀಡಿದ್ದರು.
ಸೋಮವಾರ ಕೂಡ ಭೀಮಸಂದ್ರ ಬಳಿಯಿರುವ ಬೆತ್ತಲೂರಿನಲ್ಲಿ ನಿರಂಜನ(35) ಎಂಬ ವ್ಯಕ್ತಿಯನ್ನು ರೌಡಿಶೀಟರ್ ಮಧು ಎಂಬುವವನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೊಲೆ ಪ್ರಕರಣಗಳು ಹೆಚ್ಚಾಗುತ್ತಿರುವುದು ನಗರವಾಸಿಗಳಲ್ಲಿ ಭಯದ ವಾತಾವರಣ ಮೂಡಿಸಿದೆ.