ಕೊಬ್ಬರಿ ಖರೀದಿಗೆ ಫೆ.1ರಿಂದ ನೋಂದಣಿ!

CCCCPPPRA
Published on

ತುಮಕೂರು: ಕನಿಷ್ಟ ಬೆಂಬಲ ಬೆಲೆಯಲ್ಲಿ ರೈತರಿಂದ ಉಂಡೆ ಕೊಬ್ಬರಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಜ.20ರಿಂದ ಆರಂಭವಾಗಬೇಕಿದ್ದ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಫೆ.1ಕ್ಕೆ ಮುಂದೂಡಿಕೆಯಾಗಿದೆ.

ನೋಂದಣಿ ಪ್ರಕ್ರಿಯೆಯಲ್ಲಿ ಬಯೋಮೆಟ್ರಿಕ್ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ತಂತ್ರಾಂಶ ಅಭಿವೃದ್ಧಿಪಡಿಸಲು ಖರೀದಿ ಏಜೆನ್ಸಿ ಪಡೆದಿರುವ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಕಾಲಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಜೆ.ಎನ್.ಧನಲಕ್ಷ್ಮೀ ಫೆ.1ರಿಂದ ನೋಂದಣಿ ಎಂದು ಹೊಸ ಆದೇಶ ಹೊರಡಿಸಿದ್ದಾರೆ.

ಜ.9ರಂದು ಹೊರಡಿಸಿದ್ದ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ನೋಂದಣಿ ದಿನಾಂಕವನ್ನು ಮಾತ್ರ ಜ.20ರಿಂದ ಫೆ.1 ಎಂದು ಬದಲಾಯಿಸಿ ಆದೇಶವನ್ನು ಮಾರ್ಪಡಿಸಲಾಗಿದ್ದು ಇನ್ನೂ 10 ದಿನ ಕಾಯುವುದು ರೈತರಿಗೆ ಅನಿವಾರ್ಯ ಎನ್ನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net