ತುಮಕೂರಿಂದ ಸ್ಫರ್ಧೆಗೆ ನನಗೂ ಕಾಂಗ್ರೆಸ್ ಆಹ್ವಾನಿಸಿದೆ; ಸಂಸದ ಜಿಎಸ್‌ಬಿ ಹೊಸ ಬಾಂಬ್

GSB
Published on

ತುಮಕೂರು: ಕಾಂಗ್ರೆಸ್‌ನವರು ನನ್ನನ್ನು ಅವರ ಪಕ್ಷಕ್ಕೆ ಆಹ್ವಾನಿಸಿದ್ದಾರೆ, ಬಿಜೆಪಿಯಲ್ಲಿ ವಯಸ್ಸಿನ ಮೀತಿಯಿದೆ ನಮ್ಮಲ್ಲಿ ಏನು ಇಲ್ಲಾ ಬಾ ಎಂದಿದ್ದಾರೆ ಎಂದು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ರಾಜಕೀಯ ವಲಯದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಆದರೆ, ನನ್ನದು 1939 ಹುಟ್ಟಿದ ವರ್ಷ, ವಯಸ್ಸು ಆಗಿದೆ ನಿಲ್ಲಲ್ಲ ಅಂತಾ ಹೇಳಿದ್ದೇನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಪೀಳಿಗೆಗೆ ಅವಕಾಶ ಮಾಡಿಕೊಡೊಣ ಎಂಬ ಉದ್ದೇಶದಿಂದ ಚುನಾವಣೆಗೆ ಸ್ಫಧಿಸದಿರಲು ನಿರ್ಧರಿಸಿದ್ದೇನೆ ಎಂದು ಪುನರುಚ್ಚರಿಸಿದರು.

1939 ನಾನು ಹುಟ್ಟಿದ ವರ್ಷ, ಈಗ ನನಗೆ 84 ವರ್ಷ ವಯಸ್ಸು ಆಗಿದೆ ಹಾಗಾಗು, ನಿಲ್ಲಲ್ಲ ಎಂದು ಹೇಳಿದ್ದೇನೆ, ಯುವಕರಿಗೆ ಅವಕಾಶ ಮಾಡಿಕೊಡೊಣ. ಸೋಮಣ್ಣ ಸ್ಫರ್ಧಿಸಿದರೆ ಉತ್ತಮ ವಾತಾವರಣವಿದೆ. ಮುದ್ದಹನುಮೇಗೌಡ ಆಪಾರ್ಟಿ, ಈಪಾರ್ಟಿಯಲ್ಲಿದ್ದವರು. ನನ್ನ ವಿರುದ್ಧವೇ ಗೆದ್ದವರು ಎಂದು ಆಪ್ತ ಸ್ನೇಹಿತ ಸೋಮಣ್ಣ ಪರವಾಗಿಯೂ ಬ್ಯಾಟ್ ಬೀಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದ ಜಿ.ಎಸ್.ಬಸವರಾಜು ಮೂರು ಭಾರಿ ಕಾಂಗ್ರೆಸ್ ಪಕ್ಷದಿಂದಲೇ ಸ್ಫರ್ಧಿಸಿ ಗೆದ್ದು ಸಂಸದರಾಗಿದ್ದರೆ, ಬಿಜೆಪಿಯಿಂದ ಎರಡು ಭಾರಿ ಗೆಲುವು ಪಡೆದಿದ್ದಾರೆ.
2019ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಸಹಕರದಿಂದಲೇ ಜಿಎಸ್ ಬಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಸೋಲಿಸಿ ಧೈತ್ಯಸಂಹಾರಿ ಎನ್ನಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net