ಏಳು ಹಳ್ಳಿ ಕರಿಯಮ್ಮನ ವೈಭವಯುತ ರಥೋತ್ಸವ

29HULIYAR1
Published on

ಹುಳಿಯಾರು: ಹುಳಿಯಾರು ಸಮೀಪದ ಚಿಕ್ಕಬಿದರೆ ಗ್ರಾಮದ ಏಳುಹಳ್ಳಿ ಕರಿಯಮ್ಮದೇವಿಯ ವೈಭವಯುತ ರಥೋತ್ಸವ ಸೋಮವಾರದಂದು ಶ್ರೀ ರಂಗನಾಥಸ್ವಾಮಿಯ ಸಮ್ಮುಖದಲ್ಲಿ ಸಕಲ ವಾದ್ಯಮೇಳ ಹಾಗೂ ಭಕ್ತರ ಹರ್ಷೋದ್ಗಾರದಲ್ಲಿ ವಿಜೃಂಭಣೆಯಿAದ ಜರುಗಿತು.


ರಥೋತ್ಸವದ ಅಂಗವಾಗಿ ಮುಂಜಾನೆಯೇ ರಥಕ್ಕೆ ಪುಣ್ಯಾಹ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿತ್ತು. ಚಿಕ್ಕಬಿದರೆ ಕರಿಯಮ್ಮ ಸೇರಿದಂತೆ ದೊಡ್ಡಬಿದರೆ ಕರಿಯಮ್ಮ, ಪೋಚಕಟ್ಟೆ ಕರಿಯಮ್ಮ, ಕೋಡಿಹಳ್ಳಿ ಕೋ¯್ಲÁಪುರದಮ್ಮ ದೇವರುಗಳನ್ನು ಊರಿನಿಂದ ಗುಡಿಯವರೆವಿಗೂ ಭವ್ಯವಾದ ಉತ್ಸವದಲ್ಲಿ ಕರೆತರಲಾಯಿತು.

ನಂತರ ದೇವರುಗಳನ್ನು ರಥದಲ್ಲಿ ಕುಳ್ಳಿರಿಸಿದ ಭಕ್ತರು ಜೈಕಾರ ಹಾಕುತ್ತಾ ರಥವನ್ನೆಳೆದು ಭಕ್ತಿಭಾವ ಮೆರೆದರು.


ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆದ ನಂತರ ಕಂಕಣ ವಿಸರ್ಜನೆ, ಓಕಳಿಸೇವೆ ನಡೆಯಿತು. ಇದೇ ದಿನ ಸಂಜೆ ಗಂಡುಗತ್ತರಿ ಸೇವೆ, ಧ್ವಜ ಅವರೋಹಣ ನಡೆಸಲಾಯಿತು. ಅಕ್ಕಪಕ್ಕದ ಹಳ್ಳಿಗಳಿಂದ ಆಗಮಿಸಿದ್ದ ಭಕ್ತಾಧಿಗಳು ಅಮ್ಮನವರಿಗೆ ಹಣ್ಣುಕಾಯಿ ಮಾಡಿಸಿ, ದರ್ಶನ ಪಡೆದು ಕೃತಾರ್ಥರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net