

ತುಮಕೂರು: ಹಿಂದಿನ ಬಿಜೆಪಿ ಸರ್ಕಾರ ಹಾಗೂ ಇಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯಲ್ಲಿ ಎರಡೂ ಭಾರಿ ಉದ್ಘಾಟನೆ ಭಾಗ್ಯ ಕಂಡಿರುವ ಜಿಲ್ಲಾಸ್ಪತ್ರೆ ಆವರಣದ ಟ್ರಾಮಾಕೇರ್ ಸೆಂಟರ್ ಇನ್ನೂ ಸೇವೆ ಆರಂಭಿಸಿಲ್ಲ.
ಮAಗಳವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಟ್ರಾಮಾಕೇರ್ ಸೆಂಟರ್‌ಗೆ ದಿಢೀರ್ ಭೇಟಿ ನೀಡಿದಾಗಲೂ ಸೇವೆ ಲಭ್ಯವಿಲ್ಲದಿರುವುದು ಅಧಿಕಾರಿಗಳಿಗೆ ಆಶ್ಚರ್ಯ ಮೂಡಿಸಿತು.
ಟ್ರಾಮಕೇರ್ ಸೆಂಟರ್‌ಗೆ ನೇಮಕ ಮಾಡಿಕೊಂಡಿರುವ ಮಾನವಸಂಪನ್ಮೂಲಕ್ಕೆ ತರಬೇತಿ ನೀಡಲಾಗುತ್ತಿದೆ ಹಾಗೂ ಅಪಘಾತ ಚಿಕಿತ್ಸಾ ಕೇಂದ್ರಕ್ಕೆ ಅಗತ್ಯವಿರುವ ಉಪಕರಣಗಳ ಸ್ಥಳಾಂತರ ಕಾರ್ಯ ನಡೆಯುತ್ತಿರುವುದರಿಂದ ಅ.5ರಿಂದ ಸೇವೆ ನೀಸಲಾಗುವುದು ಎಂದು ಜಿಲ್ಲಾ ಶಸ್ತç ಚಿಕಿತ್ಸಕಿ ಡಾ.ವೀಣಾ ಹೇಳಿದರು.