ಕ್ರೀಡಾಕೂಟಕ್ಕೆ ಹೋಗಿದ್ದ ವಿದ್ಯಾರ್ಥಿಯ ಶವ ಕೆರೆ ಅಂಗಳದಲ್ಲಿ ಪತ್ತೆ

26HULIYAR2
Published on

ತುಮಕೂರು: ಕ್ರೀಡಾಕೂಟ ನೋಡಲು ಹೋಗಿದ್ದ ವಿದ್ಯಾರ್ಥಿ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಕೆರೆ ಅಂಗಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಹುಳಿಯಾರಿನ ಕನಕದಾಸ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಗೋಪಾಲಪುರದ ಹೇಮಂತ್‌ಕುಮಾರ(15) ಮೃತ ಬಾಲಕ, ಆ.24ರಂದು ಹುಳಿಯಾರು-ಕೆಂಕೆರೆ ಕರ್ನಾಟಕ ಪಬ್ಲಿಕ್ ಶಾಲೆ ಮೈದಾನದಲ್ಲಿ ನಡೆಯುತ್ತಿದ್ದ ಹೈಸ್ಕೂಲ್ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಹೋದ ನಂತರ ಕಾಣೆಯಾಗಿದ್ದನು.

ಹುಳಿಯಾರು ಪೊಲೀಸರು ಅನುಮಾನಾಸ್ಪದ ಸಾವು ಎಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ. ಮೃತ ದೇಹವನ್ನು ಶವಪರೀಕ್ಷಗೆ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net