ತೋಟದಲ್ಲಿಯೇ ಅಡಕೆ ಗೊನೆ ಕದ್ದವರ ಬಂಧನ

arecanut
Published on

ತುಮಕೂರು: ಕುಣಿಗಲ್ ತಾಲೂಕು ಹನುಮಾಪುರದ ರೈತ ಯೋಗೀಶ್ ಅವರ ಬೇಗೂರು ತೋಟದಲ್ಲಿ 220 ಅಡಕೆ ಮರಗಳಲ್ಲಿ ಸುಮಾರು 25 ಕ್ವಿಂಟಾಲ್ ಹಸಿ ಅಡಕೆ ಗೊನೆಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಮಂಡ್ಯ ತಾಲೂಕಿನ ಮಂಡ್ಯಕಲ್ಲಳ್ಳಿಯ ರವಿ (58), ಕೆ.ಆರ್.ಅಭಿಜಿತ್(25), ಕೆ.ಆರ್.ಅಬಿಷೇಕ್(25), ಬೆಟ್ಟಹಳ್ಳಿಯ ಬಿ.ಕೆ.ಮಂಜುನಾಥ(27) ಹಾಗೂ ಜಿ.ಮಲ್ಲಿಗೆರೆಯ ಎಂ.ಕೆ.ಮನು(25) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳ ವಿರುದ್ಧ ಕುಣಿಗಲ್ ಠಾಣೆಯಲ್ಲಿ 1, ಹುಲಿಯೂರುದುರ್ಗ ಪೊಲೀಸ್ ಠಾಣೆಯ 1 ಅಪರಾಧ ಪ್ರಕರಣ ಈಗಾಗಲೇ ದಾಖಲಾಗಿದೆ. ಆರೋಪಿತರಿಂದ

ಕೃತ್ಯಕ್ಕೆ ಬಳಿಸಿದ್ದ ಏಂ13 ಅ-5531 ನೇ ನಂಬರಿನ ಟಾಟಾ ಎಸಿಇ ವಾಹನ ಮತ್ತು 6000ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net