ಕದ್ದ ಮಾಲು ಖರೀದಿಸಿದ್ದ ಆಟಿಕಾಬಾಬು ಬಂಧನ

WhatsApp Image 2024-06-26 at 7.52.17 PM
Published on

ತುಮಕೂರು: ಕಳ್ಳತನ ಮಾಡಿದ ಆಭರಣಗಳನ್ನು ಕಳ್ಳರಿಂದ ಕಡಿಮೆ ಬೆಲೆ ಕೊಂಡುಕೊಳ್ಳುತ್ತಿದ್ದ ಆರೋಪದ ಮೇಲೆ ಆಟಿಕಾಬಾಬು ಅಲಿಯಾಸ್ ಪಿ.ಎಸ್.ಅಯ್ಯೂಬ್(44)ನನ್ನು ತುರುವೇಕೆರೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಂದ ಚಿನ್ನ ಖರೀದಿಸಿದ ಆಟಿಕಾಬಾಬು ಬೆಂಗಳೂರಿನ ಅವರ ಮನೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಆಟಿಕಾಬಾಬು 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತುಮಕೂರು ನಗರದ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಕೆಲಕಾಲ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಚುನಾವಣೆ ನಂತರ ತುಮಕೂರಿನಿಂದ ಕಾಣೆಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net