ನ್ಯಾಯಾಲಯದಲ್ಲಿ ವಿವಿಧ ಹುದ್ದೆಗೆ ಅರ್ಜಿ

dist Court
ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
Published on

ತುಮಕೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ನೆರವು ಅಭಿರಕ್ಷಕರ ಕಚೇರಿಯಲ್ಲಿ ಖಾಲಿಯಿರುವ 2 ಕಚೇರಿ ಸಹಾಯಕ, ಗುಮಾಸ್ತ ಹಾಗೂ 2 ಜವಾನ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.


ಕಚೇರಿ ಸಹಾಯಕ/ಗುಮಾಸ್ತ ಹುದ್ದೆಗೆ ಅರ್ಜಿ ಸಲ್ಲಿಸುವವರು ಯಾವುದೇ ಪದವಿಯೊಂದಿಗೆ ಮೂಲದ ಸಂಸ್ಕರಣ ಕೌಶಲ್ಯಗಳು ಮತ್ತು ಕಾರ್ಯನಿರ್ವಹಿಸುವ ಸಾಮರ್ಥ್ಯ, ಕಂಪ್ಯೂಟರ್​ ಮತ್ತು ಡೇಟಾ ಫೀಡ್​ ಮಾಡುವ ಕೌಶಲ, ಅರ್ಜಿಗಳ ಸರಿಯಾದ ಪುಟ ಜೋಡಣೆಯೊಂದಿಗೆ ಉತ್ತಮ ಟೈಪಿಂಗ್​ ವೇಗ, ಉಕ್ತಲೇಖನ ತೆಗೆದುಕೊಳ್ಳುವ ಮತ್ತು ನ್ಯಾಯಾಲಯಗಳಲ್ಲಿ ಪ್ರಸ್ತುತಿಗಾಗಿ ಕಡತಗಳನ್ನು ಸಿದ್ಧಪಡಿಸುವ ಸಾಮರ್ಥ್ಯ, ಕಡತ ನಿರ್ವಹಣೆ ಪ್ರಕ್ರಿಯೆ ಜ್ಞಾನವನ್ನು ಹೊಂದಿರಬೇಕು.


ಜವಾನ(ಮುನ್ಸಿ/ಅಟೆಂಡೆಂಟ್​) ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್​ಎಸ್​ಎಲ್​ಸಿ ಉತ್ತೀರ್ಣರಾಗಿರಬೇಕು. ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅ.3ರೊಳಗಾಗಿ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾನೂನು ನೆರವು ಅಭಿರಕ್ಷಕರ ಕಚೇರಿಗೆ ಮಾನವ ಸಂಪನ್ಮೂಲ ವ್ಯಕ್ತಿ ನೇಮಕಾತಿ ಸಮಿತಿ, ನೆಲ ಮಹಡಿ, ಹೊಸ ನ್ಯಾಯಾಲಯಗಳ ಸಂಕೀರ್ಣ, ತುಮಕೂರು ಇವರಿಗೆ ಸಲ್ಲಿಸಬಹುದು.


ಮಾಹಿತಿಗೆ ದೂ.0816 2255133 ಅಥವಾ ಇ-ಮೇಲ್​ ವಿಳಾಸ dlsatumkur1@gmail.com ಅಥವಾ ಜಾಲತಾಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net