ಬ್ಯಾಟರಿ ಚಾಲಿತ ವೀಲ್​ಛೇರ್​ಗೆ ಅರ್ಜಿ

application
Published on

ತುಮಕೂರು:ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವೀಲ್​ಛೇರ್​ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿ 18 ವರ್ಷ ಮೇಲ್ಪಟ್ಟವರಾಗಿರಬೇಕು. ಈಗಾಗಲೇ ಇಲಾಖೆ ಅಥವಾ ಸರ್ಕಾರದ ಯಾವುದೇ ಇತರೆ ಮೂಲಗಳಿಂದ ಯಂತ್ರಚಾಲಿತ ವಾಹನ ಮತ್ತು ಬ್ಯಾಟರಿ ಚಾಲಿತ ವೀಲ್​ಛೇರ್​ ಪಡೆದಿರುವವರು ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವಂತಿಲ್ಲ.

ಅರ್ಜಿಯೊಂದಿಗೆ ಕನಿಷ್ಠ 10 ವರ್ಷಗಳಿಂದ ಕರ್ನಾಟಕದಲ್ಲಿ ವಾಸವಿರುವ ಬಗ್ಗೆ ಮತ್ತು ವಾರ್ಷಿಕ ಆದಾಯ 2ಲಕ್ಷ ರೂ.ಗಳಿಗಿಂತ ಕಡಿಮೆ ಇರುವ ಬಗ್ಗೆ ತಹಸೀಲ್ದಾರ್​ ಧೃಢೀಕೃತ ಪ್ರಮಾಣ ಪತ್ರ, ಶೇ.75 ಮತ್ತು ಅದಕ್ಕಿಂತ ಹೆಚ್ಚಿಗೆ ವಿಕಲತೆ ಹೊಂದಿರುವ ಬಗ್ಗೆ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ)ಯನ್ನು ಲಗತ್ತಿಸಿ ಸಲ್ಲಿಸಬೇಕು.

ಆಸಕ್ತ ದೈಹಿಕ ವಿಕಲಚೇತನರು ಗ್ರಾಮ ಒನ್​, ಕರ್ನಾಟಕ ಒನ್​, ತುಮಕೂರು ಒನ್​ ಮತ್ತು ಸಿಎಸ್​ಸಿ ಕೇಂದ್ರಗಳಲ್ಲಿ ಸೇವಾ ಸಿಂಧು https://suvidha.karnataka.gov.in ತಂತ್ರಾಂಶದಡಿ ಆನ್​ಲೈನ್​ ಮೂಲಕ ಜ.21ರೊಳಗೆ ಅರ್ಜಿ ಸಲ್ಲಿಸಬಹುದು.

ಮಾಹಿತಿಗೆ ಇಲಾಖೆ ವಿಕಲಚೇತನರ ಸಹಾಯವಾಣಿ 0816- 2005053, 2270029 ಅಥವಾ ಆಯಾ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net