ಅಹಾರಕ್ಕಾಗಿ ಬಂದ ಚಿರತೆ ಬಾವಿಗೆ ಬಿದ್ದು ಪರದಾಟ; ನೋಡಲು ಮುಗಿಬಿದ್ದ ಜನರು

21TMK_Cherate_Maranagere
Published on

ತುಮಕೂರು: ಆಹಾರಕ್ಕಾಗಿ ಬಂದ ಚಿರತೆ ಆಯತಪ್ಪಿ ಪಾಳು ಬಾವಿಯಲ್ಲಿ ಬಿದ್ದು ಪರದಾಡಿದ ಘಟನೆ ತಿಪಟೂರು ತಾಲೂಕು ಮಾರನಗೆರೆಯಲ್ಲಿ ಸಂಭವಿಸಿತು.

ಸಾಕಷ್ಟು ದಿನಗಳಿಂದಲೂ ಸ್ಥಳೀಯರಿಗೆ ಅಲ್ಲಲ್ಲಿ ಕಾಣಿಸಿಕೊಂಡು ಭಯ ಹುಟ್ಟಿಸಿದ್ದ ಚಿರತೆ ಸೋಮವಾರ ರಾತ್ರಿ ಅಹಾರಕ್ಕಾಗಿ ಬಂದಾಗ ಬಾವಿಗೆ ಬಿದ್ದು ಪರದಾಡುತ್ತಿತ್ತು. ಸ್ಥಳೀಯರಿಂದ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ರಕ್ಷಿಸಿ ಕೊಂಡೊಯ್ದರು.

ಸೋಮವಾರವಷ್ಟೇ ಒಂದು ಮೇಕೆಯನ್ನು ತಿಂದು ಮುಗಿಸಿದ್ದ ಚಿರತೆ ಬಾವಿಗೆ ಬಿದ್ದಿರುವ ವಿಷಯ ತಿಳಿದು ನೋಡಲು ಜಮಾಯಿಸಿದ್ದ ಜನರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net