

ತುಮಕೂರು: ತುರುವೇಕೆರೆ ತಾಲೂಕು ಹಡವನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ದುರಂತವೇ ನಡೆದು ಹೋಗಿದೆ. ಅಂಗಳದಲ್ಲಿ ಆಟವಾಡುತ್ತಿದ್ದ ಮಗು ತಲೆಯ ಮೇಲೆ ಮೇಲ್ಚಾವಣಿಯೇ ಕಳಚಿಬಿದ್ದು ಅಪಘಾತವಾಗಿದೆ.
ಘಟನೆಯಲ್ಲಿ ರುದ್ರೇಶ್ ಎಂಬ ನಾಲ್ಕು ವರ್ಷದ ಮಗು ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದ ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಕಟ್ಟದ ಮೇಲ್ಚಾವಳಿ ಶಿಥಲವಾಗಿದ್ದರ ಬಗ್ಗೆ ಸಾಕಷ್ಟು ಸಲ ದೂರು ನೀಡಿದ್ದರೂ ಸ್ಥಳೀಯ ತಲೆಕೆಡಿಸಿಕೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.