

ತುಮಕೂರು: ಜಿಲ್ಲೆಯಲ್ಲಿ ಅಗತ್ಯವಾಗಿದ್ದ 5 ಮೇಲ್ಸೇತುವೆ ನಿರ್ಮಾಣಕ್ಕೆ 350ಕೋಟಿ ರೂ. ಕಾಮಗಾರಿಗಳಿಗೆ ಕೇಂದ್ರ ಸರ್ಕಾರದ ಅನುಮತಿ ದೊರೆತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಯಾತಸಂದ್ರ&ಮೈದಾಳ ಗೇಟ್ ನಡುವೆ(ಎಲ್ಸಿ 35) 57.3ಕೋಟಿ ರೂ., ಬಡ್ಡಿಹಳ್ಳಿ ಗೇಟ್ ಅಗ್ನಿಶಾಮಕ ಠಾಣೆ ಸಮೀಪ (ಎಲ್ಸಿ 38) 89.03ಕೋಟಿ ರೂ., ಬಡ್ಡಿಹಳ್ಳಿಗೇಟ್(ಎಲ್ಸಿ 39)97.69ಕೋಟಿ ರೂ., ಹರೆಯೂರು ರಸ್ತೆ ಮಲ್ಲಸಂದ್ರಗೇಟ್(ಎಲ್ಸಿ 46) 55.99ಕೋಟಿ ರೂ. ಹಾಗೂ ತುಮಕೂರು&ಮೈಸೂರು ರಸ್ತೆಯ ನಿಟ್ಟೂರು ರೈಲ್ವೆ ಸ್ಟೇಷನ್(ಎಲ್ಸಿ 58) ಕಾಮಗಾರಿ 50.57ಕೋಟಿ ರೂ. ಸೇರಿ ಒಟ್ಟು 350 ಕೋಟಿ ರೂ. ಕಾಮಗಾರಿಗೆ ಅನುಮೋದನೆ ದೊರೆತಿದೆ ಎಂದು ತಿಳಿಸಿದ್ದಾರೆ.
ಸಂಬಂಧಿಸಿದ ಮೇಲ್ಸುತುವೆ ಕಾಮಗಾರಿಗಳ ಪ್ರಕ್ರಿಯೆಗಳನ್ನುನ ಪೂರ್ಣಗೊಳಿಸಲು ಅಗತ್ಯಕ್ರಮ ಕೈಗೊಂಡು ಶ್ರೀದಲ್ಲಿಯೇ ಲೋಕಾರ್ಪಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.