ಗುಬ್ಬಿ ಠಾಣೆಯಲ್ಲಿ 100 ಜನರ ವಿರುದ್ಧ 13 ಎಫ್​ಐಆರ್​!; ಶಾಸಕರು, ಮಠಾಧೀಶರ ಮೇಲೂ ಕೇಸ್​

HEME
Published on

ತುಮಕೂರು: ಹೇಮಾವತಿ ಲಿಂಕ್​ ಕೆನಾಲ್​ ವಿರೋಧಿಸಿ ಶನಿವಾರ ಗುಬ್ಬಿ ತಾಲೂಕಿನಲ್ಲಿ ನಡೆದ ಹೋರಾಟಕ್ಕೆ ಜಿಲ್ಲಾಡಳಿತ ಪ್ರತಿಕಾರ ತೀರಿಸಿಕೊಂಡಿದೆ, ಹೊರಾಟದಲ್ಲಿ ಭಾಗವಹಿಸಿದ್ದ ಶಾಸಕರು, ವಿವಿಧ ಮಠಗಳ ಸ್ವಾಮೀಜಿಗಳು, ಮುಖಂಡರು ಹಾಗೂ ರೈತರ ಮೇಲೆ ಭಾನುವಾರ ಪ್ರಕರಣ ದಾಖಲಿಸಿಕೊಂಡಿದ್ದು ಹೋರಾಟಗಾರರನ್ನು ಕೆರಳಿಸುವಂತೆ ಮಾಡಿದೆ.

ವೀಡಿಯೋ ದೃಶ್ಯಗಳನ್ನು ಆಧರಿಸಿ ಗುಬ್ಬಿ ಠಾಣೆಯಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್​, ಬಿ.ಸರೇಶ್​ಗೌಡ, ಎಂ.ಟಿ.ಕೃಷ್ಣಪ್ಪ, ರವಿ ಹೆಬ್ಬಾಕ, ದಿಲೀಪ್​ಕುಮಾರ್​ ಹಾಗೂ ವಿವಿಧ ಮಠಾಧೀಶರು ಸೇರಿದಂತೆ ಒಟ್ಟು 100 ಜನ ಮುಖಂಡರ ವಿರುದ್ಧ 13 ಎ್​ಐಆರ್​ಗಳನ್ನು ದಾಖಲಿಸಿದ್ದಾರೆ.

ಹೋರಾಟಗಾರರ ವಿರುದ್ಧ ಕೊಲೆಯತ್ನ, ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ, 144 ನಿಷೇಧಾಜ್ಞೆ ಉಲ್ಲಂನೆ, ಸರ್ಕಾರಿ ಹಾಗೂ ಖಾಸಗಿ ಆಸ್ತಿ ಹಾನಿ, ಜೆಸಿಬಿ, ಹಿಟಾಚಿ ಚಾಲನೆ ಸೇರಿದಂತೆ ಹೋರಾಟಗಾರರ ಮೇಲೆ ಎಷ್ಟು ಸಾಧ್ಯವೊ ಅಷ್ಟೂ ಕಾನೂನುಗಳನ್ನು ಬಳಸಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net