

ತುಮಕೂರು: ಸರ್ಕಾರ ಬದಲಾಗಿ, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಕೂಡ ವರ್ಗಾವಣೆಗೊಂಡು ತಿಂಗಳುಗಳೇ ಕಳೆದಿದ್ದರೂ ತುಮಕೂರು ಜಿಪಂ ಅಧಿಕೃತ ವೆಬ್‌ಸೈಟ್ ಅಪ್‌ಡೇಟ್ ಆಗಿಯೇ ಇಲ್ಲ.
ತುಮಕೂರು ಜಿಪಂ ವೆಬ್‌ಸೈಟ್‌ನಲ್ಲಿ ಇಂದಿಗೂ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಹೆಸರು ಇನ್ನೂ ಬದಲಾಗಿಲ್ಲ. ಚುನಾಯಿತ ಪ್ರತಿನಿಧಿಗಳು ಖಾಲಿಯಾಗಿ ವರ್ಷಗಳು ಕಳೆದಿದ್ದು ಅವರ ಹೆಸರುಗಳನ್ನು ಮಾತ್ರ ವೆಬ್‌ಸೈಟ್‌ನಿಂದ ತೆಗೆಯಲಾಗಿದೆ.
ಪ್ರಸ್ತುತ ತುಮಕೂರು ಜಿಲ್ಲಾಧಿಕಾರಿಯಾಗಿ ಕೆ.ಶ್ರೀನಿವಾಸ್ ಹಾಗೂ ಜಿಪಂ ಸಿಇಒ ಆಗಿ ಜಿ.ಪ್ರಭು ಅಧಿಕಾರ ವಹಿಸಿಕೊಂಡು ತಿಂಗಳುಗಳೇ ಕಳೆದಿವೆ. ಜಿಲ್ಲಾಡಳಿತದ ಮುಖ್ಯಸ್ಥರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೂ ಇಲಾಖೆಯ ವೆಬ್‌ಸೈಟ್ ಕಡೆ ಗಮನ ಹರಿಸದಿರುವುದು ಆಶ್ಚರ್ಯ ಮೂಡಿಸಿದೆ.
ಇಲಾಖೆಯ ಮುಖ್ಯಸ್ಥರ ಹೆಸರು, ಪೋಟೋಗಳೇ ಬದಲಾಗದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಕಾರ್ಯಕ್ರಮಗಳು, ಪ್ರಗತಿಯ ಅಂಕಿ, ಅಂಶಗಳನ್ನು ನಿರೀಕ್ಷಿಸುವುದು ತಪ್ಪಾಗಲಿದೆ.