

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಕೆರೆ ಹುಳಿಯಾರು ಕೆರೆ 47 ವರ್ಷಗಳ ನಂತರ ಕೋಡಿ ಹರಿದ ಹಿನ್ನೆಲೆಯಲ್ಲಿ ಸ್ಥಳೀಯರು ಕಾಸಿಗೊಂದು ಸೇರು ರಾಗಿ ಮಾರಿ ಸಂಪ್ರದಾಯ ಮುಂದುವರಿಸಿದರು.
ಕೆರೆ ಕೋಡಿ ಬಿದ್ದಾಗ ಕಾಸಿಗೆ ಒಂದು ಸೇರು ಧಾನ್ಯ ಮಾರಿದ ಇತಿಹಾವಿರುವ ಹುಳಿಯಾರು ಕೆರೆ ಅಪರೂಪಕ್ಕೆ ಕೋಡಿ ಹರಿದಿದ್ದು ಜನರು ಸಂಭ್ರಮದಿAದ ಸಂಪ್ರದಾಯವನ್ನು ಮುಂದುವರಿಸಿದರು.
ರಾಗಿ ಬೆಳೆದವರು ಸ್ವಯಂ ಪ್ರೇರಣೆಯಿಂದ ಚೀಲಗಟ್ಟಲೆ ರಾಗಿ ತಂದು ದೇವಸ್ಥಾನ ಬಳಿ ಸುರಿದರು. ಏನಕ್ಕೂ ಪ್ರಯೋಜನವಿಲ್ಲವೆಂದು ಮನೆಯ ಮೂಲೆಯಲ್ಲಿ ಬಿಸಾಕಿದ್ದ ತಾಮ್ರದ ಕಾಸುಗಳ ಹುಡುಕಾಟ, ತಡಕಾಟ ನಡೆಸಿದ ಜನರು ರಾಗಿ ಕೊಂಡರು.