ತುಳುನಾಡು ಕ್ಯಾಲೆಂಡರ್​ 2025 ಬಿಡುಗಡೆ

IMG_20241227_202758_558.jpg
Published on

ಹುಬ್ಬಳ್ಳಿ: ಇಲ್ಲಿಯ ಗ್ಲೋಬಲ್ ಮೀಡಿಯಾದ 2025ರ ತುಳುನಾಡು ಪಂಚಾಂಗ ಕ್ಯಾಲೆಂಡರ್ ಅನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಮಾಡಿದರು.

ಕರ್ನಾಟಕ ರಾಜ್ಯದ ತುಳುನಾಡು ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಪ್ರಮುಖ ಯಾತ್ರಾ ಕೇಂದ್ರಗಳು, ಅನೇಕ ಇತಿಹಾಸ ಪ್ರಸಿದ್ಧ ಪೌರಾಣಿಕ ಶ್ರದ್ಧಾ ಕೇಂದ್ರಗಳು ಇಲ್ಲಿವೆ.

2025ರ ಕ್ಯಾಲೆಂಡರ್ ಗಣಪತಿ ದೇವಸ್ಥಾನಗಳಾದ ಶರವು ಮಹಾಗಣಪತಿ ದೇವಸ್ಥಾನ ಮಂಗಳೂರು, ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ, ಉಡುಪಿ, ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪಡುಬಿದ್ರಿ ಉಡುಪಿ, ಪಿಲಾರುಖಾನ್ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಉಡುಪಿ, ಶ್ರೀಕ್ಷೇತ್ರ ಗಣೇಶಪುರ ಮಹಾಗಣಪತಿ ದೇವಸ್ಥಾನ ಗಣೇಶಪುರ-ಕಾಟಿಪಳ್ಳ, ಮಂಗಳೂರು, ಸೌತಡ್ಕ ಮಹಾಗಣಪತಿ ದೇವಸ್ಥಾನ ಧರ್ಮಸ್ಥಳ, ಪೆರ್ಣಂಕಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಉಡುಪಿ, ಮಹಾಗಣಪತಿ ದೇವಸ್ಥಾನ ಸೋಮೇಶ್ವರ ಉಡುಪಿ, ಮಹತೋಭಾರ ಸಿದ್ಧಿವಿನಾಯಕ ದೇವಸ್ಥಾನ ಉದ್ಯಾವರ, ಉಡುಪಿ, ಆನೆಗುಡ್ಡೆ ವಿನಾಯಕ ದೇವಸ್ಥಾನ ಕುಂಭಾಶಿ, ಉಡುಪಿ, ಮಹತೋಭಾರ ಸಿದ್ಧಿವಿನಾಯಕ ದೇವಸ್ಥಾನ ಉಪ್ಪೂರು, ಮಹಾಗಣಪತಿ ದೇವಸ್ಥಾನ ಆಳದಂಗಡಿ, ದಣ ಕನ್ನಡ ಇವುಗಳ ಮೂಲ ವಿಗ್ರಹದ ಅಲಂಕಾರವುಳ್ಳ ನೈಜ ಚಿತ್ರಣವನ್ನು ಹೊಂದಿದೆ.

ವಿಶೇಷ ಕ್ಯಾಲೆಂಡರ್ ಗಳಿಗೆ ರಾಜ್ಯ ಹಾಗೂ ವಿದೇಶಗಳಲ್ಲಿ ಬೇಡಿಕೆ ಇದೆ. ಬಿಡುಗಡೆಯ ಸಂದರ್ಭದಲ್ಲಿ ಎಸ್ ಡಿ ಎಂ ಸೊಸೈಟಿಯ ಸೆಕ್ರೆಟರಿ ಜೀವಂಧರ ಕುಮಾರ, ಉದ್ಯಮಿ ಸತೀಶ ಡಿ. ಶೆಟ್ಟಿ, ಮತ್ತು ಗ್ಲೋಬಲ್ ಮೀಡಿಯಾದ ಸತೀಶರಾವ್ ಮತ್ತು ದಿನೇಶ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net