ಸಿಡ್ನಿಯಲ್ಲಿ ಗಮನ ಸೆಳೆದ ಕರಾವಳಿ ಉತ್ಸವ

tulunadu
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ತುಳು ಭಾಷೆ ಪಂಚ ದ್ರಾವಿಡ ಭಾಷೆಯಲ್ಲಿ ಮೇಲ್ಪಂಕ್ತಿಯಲ್ಲಿದ್ದರೂ ಮಾತೃ ಭಾಷೆಗೆ ಸೀಮಿತವಾಗಿದೆ. ಹೊರದೇಶದಲ್ಲಿದ್ದರೂ ಮಕ್ಕಳಿಗೆ ತುಳು ಭಾಷೆ, ಸಂಸ್ಕೃತಿ ಪರಿಚಯಿಸುವ ಕಾರ್ಯ ಅಭಿನಂದನೀಯ ಎಂದು ತುಳು ರಂಗಭೂಮಿ ಮತ್ತು ಚಲನಚಿತ್ರ ನಟ ಅರವಿಂದ ಬೋಳಾರ್ ಹೇಳಿದರು.
ಸಿಡ್ನಿಯಲ್ಲಿ ಇತ್ತೀಚೆಗೆ ಕರಾವಳಿ ಉತ್ಸವದ ಮೂಲಕ ಅನಿವಾಸಿ ಭಾರತೀಯರು ಮತ್ತು ಮಕ್ಕಳಿಗೆ ಇಲ್ಲಿನ ಸಂಸ್ಕೃತಿ ಪರಿಚಯಿಸುವ ಕಾರ್ಯದಲ್ಲಿ ಮಾತನಾಡಿದರು.

ಚೆಂಡೆ ವಾದನದ ಮೂಲಕ ಅತಿಥಿಗಳನ್ನು ಸ್ವಾಗತಿಸಿ, ಕರಾವಳಿಯ ನೃತ್ಯ ಪ್ರಕಾರಗಳ ಸಹಿತ ಭಾರತೀಯ ನೃತ್ಯ ವೈಭವ, ಯಕ್ಷಗಾನ, ಜಾನಪದ ನೃತ್ಯ, ತುಳು ಪದ್ಯ, ಚುಟುಕು ಹಾಗೂ ಹಾಸ್ಯ ರಸಾಯನಗಳು ಗಮನ ಸೆಳೆದವು. ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆಸ್ಟ್ರೇಲಿಯಾ ಭೇಟಿ ಸಂದರ್ಭ ನೃತ್ಯ ಆಯೋಜಿಸಿದ ಪಲ್ಲವಿ ಭಾಗವತ್ ಅವರ ನಾಟ್ಯೋಕ್ತಿ ತಂಡ ವಿಶೇಷ ನೃತ್ಯ ಕಾರ್ಯಕ್ರಮ ನೀಡಿತ್ತು. ಕರಾವಳಿಯ ತುಳು ಸಂಸ್ಕೃತಿ ಮಾತ್ರವಲ್ಲದೆ ಪಕ್ಕದ ಗೋವಾ, ಮಹಾರಾಷ್ಟ್ರ, ಕೇರಳ ಪ್ರಾದೇಶಿಕ ವಸ್ತ್ರ ವೈವಿಧ್ಯ ಸಂಸ್ಕೃತಿಯನ್ನು ಪರಿಚಯಿಸಲಾಯಿತು. ತುಳು ಫಿಲ್ಮಿ ಡ್ಯಾನ್ಸ್, ಕರಾವಳಿ ಪ್ಯಾಷನ್ ಶೋ ನಡೆಸಲಾಯಿತು.

ಸ್ಪರ್ಧೆಗಳು, ಆಹಾರ ವೈವಿಧ್ಯ
ಕರಾವಳಿಯ ಪ್ರಕೃತಿ ಬಗ್ಗೆ ಮಕ್ಕಳಿಗೆ ಪೆನ್ಸಿಲ್ ಆರ್ಟ್ ಸ್ಪರ್ಧೆ, ಯುವಕ ಯುವತಿಯರಿಗೆ ವಾಟರ್ ಕಲರ್, ತೈಲವರ್ಣ ಹಾಗೂ ರಂಗೋಲಿ ವಿಭಾಗದಲ್ಲಿ ಯಕ್ಷಗಾನ ಮುಖವರ್ಣಿಕೆ ಸ್ಪರ್ಧೆ, ಹಿರಿಯರಿಗೆ ಕರಾವಳಿಯ ಆಹಾರ ವೈವಿಧ್ಯ ತಯಾರಿ ಮತ್ತು ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು. ಕರಾವಳಿಯ ತಿಂಡಿಗಳ ಪರಿಚಯ, ಹೋಳಿಗೆ, ಹಪ್ಪಳ, ಶ್ಯಾವಿಗೆ, ವಿವಿಧ ರುಚಿಯ ಅವಲಕ್ಕಿ, ಪುಂಡಿ, ಬೋಂಡಾ, ಚರುಮುರಿ ವೈವಿಧ್ಯ, ಆಸ್ಟ್ರೇಲಿಯಾದ ತಿಂಡಿಗಳು, ವಿವಿಧ ಐಸ್‌ಕ್ರೀಮ್, ಪಾನ್ ಹಾಗೂ ಕರಾವಳಿಯ ಊಟ ವೈವಿಧ್ಯಗಳು ಮನಸೂರೆಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net