ತುಳು ಯಕ್ಷಗಾನದ ಆಮಂತ್ರಣ ಪತ್ರಿಕೆ ಬಿಡುಗಡೆ

Btw_tulu-Yakshagana
Published on

ಬಂಟ್ವಾಳ: ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಮಂಗಳೂರು ಆಶ್ರಯದಲ್ಲಿ ನ.10ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಆದಿದ್ರಾವಿಡ ಸಮಾಜ ಬಾಂಧವರ ಆರಾಧನಾ ಶಕ್ತಿಗಳಾದ ಶ್ರೀ ಸತ್ಯಸಾರಮಾನಿ ಕಾನದ ಕಟದರ ಸಂಪೂರ್ಣ ಇತಿಹಾಸ ಸಾರುವ ತುಳುನಾಡ ಸತ್ಯೊಲು ಕಾನದ ಕಟದೆರ್ ತುಳು ಯಕ್ಷಗಾನದ ಆಮಂತ್ರಣ ಪತ್ರಿಕೆ ಬಿಡುಗಡೆ ಬಿ.ಸಿ.ರೋಡಿನ ರಿಕ್ಷಾ ಭವನದಲ್ಲಿ ನಡೆಯಿತು.

ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯ ಜನಾರ್ದನ ಚೆಂಡ್ತಿಮಾರ್, ರಾಜ್ಯ ಜತೆ ಕಾರ್ಯದರ್ಶಿ ತನಿಯಪ್ಪ ಪಡ್ಡಾಯೂರು, ಆದಿದ್ರಾವಿಡ ನೌಕರರ ಸಂಘದ ಅಧ್ಯಕ್ಷ ರಾಜೀವ್ ಕಕ್ಕೆಪದವು, ಆದಿದ್ರಾವಿಡ ಸಮಾಜ ಸೇವಾ ಸಂಘದ ಬಂಟ್ವಾಳ ತಾಲೂಕು ಘಟಕದ ಗೌರವಾಧ್ಯಕ್ಷ ಧರ್ಣಪ್ಪ ಬಡಗಬೆಳ್ಳೂರು, ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಸುನೀಲ್ ಕಂಕನಾಡಿ, ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್ ಪಾಳ್ಯ, ಜಯ ಪುತ್ತೂರು, ಕಾರ್ಯಕ್ರಮ ಸಂಯೋಜಕ ಗಣೇಶ್ ಪ್ರಸಾದ್ ಮೂಡುಬಿದಿರೆ, ಸತೀಶ್ ಅರಳ ರಾಜ ಚೆಂಡ್ತಿಮಾರ್, ವೆಂಕಟೇಶ್ ಕೃಷ್ಣಾಪುರ, ಮೋಹನ್ ಬಡಗಬೆಳ್ಳೂರು, ರಾಮ ಚೆಂಡ್ತಿಮಾರ್, ಲಕ್ಷ್ಮಣ ಚೆಂಡ್ತಿಮಾರ್, ಮೋಹನ್ ವಾಮದಪದವು, ಸಂದೀಪ್ ಕಂಕನಾಡಿ, ನವೀನ್ ಸರಪಾಡಿ, ರತೀಶ್ ಸರಪಾಡಿ, ಆನಂದ ಕೆದ್ದಳಿಕೆ ಉಪಸ್ಥಿತರಿದ್ದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಕಡೇಶಿವಾಲಯ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net