ಕುಂಜೂರು ದೇವಳಕ್ಕೆ ತುಳು ಲಿಪಿ ನಾಮಫಲಕ

temple
Published on

ಪಡುಬಿದ್ರಿ: ತುಳು ಭಾಷೆ, ಸಂಸ್ಕೃತಿಯ ಮೂಲ ಮೌಲ್ಯ ತಿಳಿಯುವ ಉದ್ದೇಶದಿಂದ ‘ತುಳು ಲಿಪಿ’ ಕಲಿಯಬೇಕು. ಜನರಿಗೆ ಕಲಿಸಬೇಕು, ತುಳುಲಿಪಿಯಲ್ಲಿ ಬರೆಯಲಾದ ಸಾಹಿತ್ಯ ಓದಬೇಕು ಎಂಬ ಉದ್ದೇಶಗಳಿಂದ ತುಳುವಾಸ್ ಕೌನ್ಸಿಲ್ ಆಯೋಜಿಸಿರುವ ತುಳು ಬರೆಕ ಅಭಿಯಾನಕ್ಕೆ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ತುಳು ಲಿಪಿಯಲ್ಲಿ ನಾಮ ಫಲಕ ಬರೆಯಿಸಿ ಸೋಮವಾರ ರಾತ್ರಿ ಚಾಲನೆ ನೀಡಲಾಯಿತು.

ಪವಿತ್ರಪಾಣಿ ಕೆ.ಎಲ್. ಕುಂಡಂತಾಯ ಮಾತನಾಡಿ, ತುಳು ಬರೆಯುವ ಅಭಿಯಾನದ ಮೊದಲ ಹೆಜ್ಜೆಯಾಗಿ ಕುಂಜೂರಿನ ಯುವಕರು ಕುಂಜೂರು ದೇಗುಲದ ನಾಮಫಲಕವನ್ನು ತುಳುವಿನಲ್ಲೇ ಬರೆಯಿಸಿ ಮಾತೃ ಭಾಷೆಯನ್ನು ಗೌರವಿಸಿದ್ದಾರೆ. ತುಳುವಾಸ್ ಕೌನ್ಸಿಲ್ ಸಂಘಟನೆಯ ಪ್ರಯತ್ನ ಮಾದರಿಯಾಗಿದೆ ಎಂದರು.

ತುಳುವಾಸ್ ಕೌನ್ಸಿಲ್ ನಿರ್ದೇಶಕ ಅವಿನಾಶ್ ಶೆಟ್ಟಿ ಕುಂಜೂರು ಮಾತನಾಡಿ, ತುಳು ಬರೆಕ ಅಭಿಯಾನದ ಮೂಲಕ ಪ್ರತಿ ಮನೆ ಮನೆಗೂ ತುಳು ನಾಮ ಫಲಕ ಅಳವಡಿಸಲು ಯೋಚಿಸಲಾಗಿದೆ ಎಂದರು. ಶ್ರೀ ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ದೇವರಾಜ ರಾವ್ ನಡಿಮನೆ, ಆಡಳಿತ ಮಂಡಳಿ ಸದಸ್ಯ ಶ್ರೀವತ್ಸ ರಾವ್, ಅರ್ಚಕ ಚಕ್ರಪಾಣಿ ಉಡುಪ, ಪ್ರಬಂಧಕ ರಾಘವೇಂದ್ರ ಶೆಟ್ಟಿ, ಶ್ರೀ ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ವಿಶ್ವನಾಥ ಉಡುಪ, ಸುಬ್ರಹ್ಮಣ್ಯ ಭಟ್, ಶ್ರೀಧರ ಮಂಜಿತ್ತಾಯ, ರಘುಪತಿ ಉಡುಪ, ರಾಕೇಶ್ ಕುಂಜೂರು, ಪುಷ್ಪರಾಜ ಶೆಟ್ಟಿ, ಭಾರ್ಗವ ಕುಂಡಂತಾಯ, ಕೌಶಿಕ್ ಉಡುಪ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net