ತುಳುಕೂಟ ಕುವೈಟ್‌ಗೆ ಬೆಳ್ಳಿಹಬ್ಬದ ಸಂಭ್ರಮ; ಸಂಸ್ಕೃತಿ ಪರಿಚಯಿಸುವ ವಿವಿಧ ಕಾರ್ಯಕ್ರಮ

kuwait
ಮಂಗಳೂರು ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತುಳುಕೂಟ ಕುವೈಟ್‌ನ ಅಧ್ಯಕ್ಷ ಅಬ್ದುಲ್ ರಝಾಕ್ ನಿಟ್ಟೆ ಮಾಹಿತಿ ನೀಡಿದರು. ತುಳುಕೂಟ ಕುವೈಟ್‌ನ ಮಾಜಿ ಅಧ್ಯಕ್ಷ ಎ.ಕೆ.ರವೀಂದ್ರ, ಚಂದ್ರಹಾಸ ಶೆಟ್ಟಿ, ಚಾಪರ‌್ಕ ತಂಡದ ದೇವದಾಸ್ ಕಾಪಿಕಾಡ್, ಕಾರ್ಯಕಾರಿ ಸಮಿತಿಯ ಅರವಿಂದ ಭಂಡಾರಿ, ಎಲಿಯಾಸ್, ಮನೋಜ್ ಶೆಟ್ಟಿ ಕಿನ್ನಿಗೋಳಿ ಉಪಸ್ಥಿತರಿದ್ದರು.
Published on
  • ಮಂಗಳೂರು: ತುಳುಕೂಟ ಕುವೈಟ್ ಬೆಳ್ಳಿಹಬ್ಬದ ಪ್ರಯುಕ್ತ ಅ.25ರಂದು ಕುವೈತ್‌ನ ಹವಾಲಿಯ ಅಮೆರಿಕನ್ ಇಂಟರ್‌ನ್ಯಾಷನಲ್ ಸ್ಕೂಲ್ ಆಡಿಟೋರಿಯಂನಲ್ಲಿ ಸಾಂಸ್ಕೃತಿಕ ಉತ್ಸವ ‘ತುಳು ಪರ್ಬ- 2024’ ಆಯೋಜಿಸಲಾಗಿದೆ ಎಂದು ತುಳುಕೂಟ ಕುವೈಟ್‌ನ ಅಧ್ಯಕ್ಷ ಅಬ್ದುಲ್ ರಝಾಕ್ ನಿಟ್ಟೆ ಹೇಳಿದರು.
  • ತುಳುನಾಡಿನ ಸಂಸ್ಕೃತಿ ಪರಿಚಯಿಸುವ ವಿವಿಧ ಕಾರ್ಯಕ್ರಮಗಳು, ಚಾಪರ‌್ಕ ತಂಡದ ‘ನಮಸ್ಕಾರ ಮೇಸ್ಟ್ರೆ’ ತುಳುನಾಟಕ ಈ ಸಂದರ್ಭ ಪ್ರದರ್ಶನಗೊಳ್ಳಲಿದೆ ಎಂದು ನಗರದ ಪತ್ರಿಕಾ ಭವನದಲ್ಲಿ ಶನಿವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
  • 2000ರಲ್ಲಿ ಆರಂಭಗೊಂಡ ತುಳುಕೂಟ ಕುವೈಟ್ 25 ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. 4,000 ನೋಂದಾಯಿತ ಸದಸ್ಯರನ್ನೊಳಗೊಂಡಿದೆ. ಸಂಸ್ಥೆಯು ಸಾಮಾಜಿಕ ಸೇವಾ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಪ್ರಾಜೆಕ್ಟ್ ಎಜುಕೇಶನ್ ಯೋಜನೆಯಡಿ ತುಳುನಾಡಿನ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಹಣಕಾಸು ನೆರವು ಒದಗಿಸಿದೆ. ಈ ವರ್ಷ ಎಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ 17 ಸರ್ಕಾರಿ ಶಾಲೆಗಳ 33 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ. ಹಲವು ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ನೀಡಲಾಗಿದೆ. ಶಾಲಾ ಕಟ್ಟಡಗಳ ದುರಸ್ತಿ, ಶಾಲೆಗಳಿಗೆ ಶೌಚಗೃಹಗಳ ನಿರ್ಮಾಣ, ಕಂಪ್ಯೂಟರ್, ಪೀಠೋಪಕರಣ ಕೊಡುಗೆ ನೀಡಲಾಗಿದೆ. ಆಶ್ರಯ ಯೋಜನೆಯಡಿ ಬಡಕುಟುಂಬಗಳಿಗೆ 3 ಮನೆ ನಿರ್ಮಿಸಿಕೊಡಲಾಗಿದ್ದು ಮತ್ತೊಂದು ಮನೆ ನಿರ್ಮಾಣ ಯೋಜನೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
  • ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕುವೈತ್ ಹಾಗೂ ಮಂಗಳೂರಿನಲ್ಲಿ ಆಹಾರವಸ್ತುಗಳ ಕಿಟ್ ವಿತರಣೆ, ಕುವೈತ್‌ನಲ್ಲಿ ಕಷ್ಟಕ್ಕೆ ಸಿಲುಕಿ ಊರಿಗೆ ಬರಬೇಕಿದ್ದವರಿಗೆ ಚಾರ್ಟರ್ಡ್ ವಿಮಾನದ ವ್ಯವಸ್ಥೆ ಮಾಡಿಕೊಡಲಾಗಿದೆ. ದ.ಕ, ಉಡುಪಿಯ ವಿವಿಧ ಸಂಘ ಸಂಸ್ಥೆಗಳಿಗೆ ಹಣಕಾಸು ನೆರವು ಒದಗಿಸಲಾಗಿದೆ. ತುಳುಕೂಟ ಕುವೈಟ್‌ನ ಸದಸ್ಯರಿಗೆ ಹಣಕಾಸು ನೆರವು, ವೈದ್ಯಕೀಯ ನೆರವು, ವಿದ್ಯಾರ್ಥಿವೇತನ ಮೊದಲಾದವುಗಳನ್ನು ಒದಗಿಸಲಾಗುತ್ತಿದೆ. ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಆಯೋಜಿಸಿಕೊಂಡು ಬರಲಾಗಿದೆ. ಉಡುಪಿ ಮತ್ತು ಮಂಗಳೂರಿನ ತಲಾ ಒಂದು ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗಾಗಿ ಡಯಾಲಿಸಿಸ್ ಯಂತ್ರಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
  • ಸುದ್ದಿಗೋಷ್ಠಿಯಲ್ಲಿ ತುಳುಕೂಟ ಕುವೈಟ್‌ನ ಮಾಜಿ ಅಧ್ಯಕ್ಷ ಎ.ಕೆ.ರವೀಂದ್ರ, ಚಂದ್ರಹಾಸ ಶೆಟ್ಟಿ, ಚಾಪರ‌್ಕ ತಂಡದ ದೇವದಾಸ್ ಕಾಪಿಕಾಡ್, ಕಾರ್ಯಕಾರಿ ಸಮಿತಿಯ ಅರವಿಂದ ಭಂಡಾರಿ, ಎಲಿಯಾಸ್, ಮನೋಜ್ ಶೆಟ್ಟಿ ಕಿನ್ನಿಗೋಳಿ ಉಪಸ್ಥಿತರಿದ್ದರು.

ಮಂಗಳೂರು ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತುಳುಕೂಟ ಕುವೈಟ್‌ನ ಅಧ್ಯಕ್ಷ ಅಬ್ದುಲ್ ರಝಾಕ್ ನಿಟ್ಟೆ ಮಾಹಿತಿ ನೀಡಿದರು. ತುಳುಕೂಟ ಕುವೈಟ್‌ನ ಮಾಜಿ ಅಧ್ಯಕ್ಷ ಎ.ಕೆ.ರವೀಂದ್ರ, ಚಂದ್ರಹಾಸ ಶೆಟ್ಟಿ, ಚಾಪರ‌್ಕ ತಂಡದ ದೇವದಾಸ್ ಕಾಪಿಕಾಡ್, ಕಾರ್ಯಕಾರಿ ಸಮಿತಿಯ ಅರವಿಂದ ಭಂಡಾರಿ, ಎಲಿಯಾಸ್, ಮನೋಜ್ ಶೆಟ್ಟಿ ಕಿನ್ನಿಗೋಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net