

ತುಳು ರಂಗಭೂಮಿ ಕಲಾವಿದ ಪ್ರಕಾಶ್.ಟಿ.ಶಕ್ತಿನಗರ ನಿಧನ
ಮಂಗಳೂರು :ಶಕ್ತಿನಗರ ನಿವಾಸಿ,ತುಳು ರಂಗಭೂಮಿ ಕಲಾವಿದ ಪ್ರಕಾಶ್.ಟಿ.ಶಕ್ತಿನಗರ (62) ಅಲ್ಪ ಕಾಲದ ಅಸೌಖ್ಯದಿಂದ
ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಚಾಪರ್ಕ ನಾಟಕ ತಂಡದ ಹಿರಿಯ ಕಲಾವಿದರಾಗಿ ಅನೇಕ ನಾಟಕಗಳಲ್ಲಿ ಪಾತ್ರ ವಹಿಸಿದ್ದರು. ವೃತ್ತಿಯಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದರು. ತಾಯಿ, ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ .