ಹಲವು ಭಾಷೆಗಳೊಂದಿಗೆ ಬೆರತ ತುಳು ಸಂಸ್ಕೃತಿ

Hbr 31 may 02
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಹಲವು ಭಾಷೆ, ಸಮುದಾಯಗಳ ಜೊತೆ ಸಹಬಾಳ್ವೆ, ಸಾಮರಸ್ಯದೊಂದಿಗೆ ಬೆರೆತು ಬದುಕಿದ ತುಳುನಾಡ ಮಂದಿ ಕಟ್ಟಿ ಬೆಳೆಸಿದ ತುಳು ಸಂಸ್ಕೃತಿ ಅದರ ಹೆಸರಿಗೆ ತಕ್ಕಂತೆ ಮಧುರವಾದುದೂ, ಮೃದುವಾದುದೂ ಆಗಿದೆ ಎಂದು ಮೂಲ್ಕಿ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಅಭಿಪ್ರಾಯಪಟ್ಟರು.

ಹಿರಿಯಡಕ ಸ.ಪ್ರ.ದ. ಕಾಲೇಜಿನ ತುಳುಕೂಟ ವತಿಯಿಂದ ನಡೆದ ‘ಐಲೇಸಾ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವರ್ತಮಾನ ಕಾಲದ ಬೆಳವಣಿಗೆಗಳು ತುಳುನಾಡಿನ ನಿಜ ಬದುಕಿನಿಂದ ಬಹುದೂರ ಸರಿದುಕೊಂಡಂತಿದೆ ಎಂದು ವಿಷಾದಿಸಿದರು.

ತಂಗಾಣ ಮದೀಪುದಾರ ಸುಧಾಕರ ಶೆಟ್ಟಿ ತುಳುನಾಡಿನ ಆಚಾರ ವಿಚಾರಗಳಲ್ಲಿನ ಅವೈದಿಕ ಪರಂಪರೆಯ ಗಟ್ಟಿ ನೆಲೆಗಳನ್ನು ಪರಿಚಯಿಸಿದರು. ತುಳು ರಂಗಭೂಮಿಯ ಕುರಿತು ರಂಗಭೂಮಿ ಕಲಾವಿದ ಸತೀಶ್ ಆಚಾರ್ಯ, ಸಂಗೀತ ಪರಂಪರೆಯ ಕುರಿತು ವಿದುಷಿ ಉಷಾ ಹೆಬ್ಬಾರ್ ಮಾತನಾಡಿದರು.

ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್.ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ.ಸೌಮ್ಯಲತಾ ಪಿ., ಐಕ್ಯುಎಸಿ ಸಂಚಾಲಕ ಲಿತಿನ್ ಬಿ.ಎಂ. ಉಪಸ್ಥಿತರಿದ್ದರು. ನವ್ಯಶ್ರೀ ಪ್ರಾರ್ಥಿಸಿದರು. ತುಳುಕೂಟದ ಸಂಚಾಲಕ ಬಾಲಾಜಿ ಸ್ವಾಗತಿಸಿದರು. ಶರತ್ ವಂದಿಸಿದರು. ವಿನುತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net