ಆಂಧ್ರ ಪ್ರದೇಶಕ್ಕೆ ಅಧ್ಯಯನ ತಂಡ - ತುಳುವಿಗೆ ಅಽಕೃತ ಭಾಷೆ ಸ್ಥಾನಮಾನ ವಿಚಾರ

Published on

ಪುತ್ತೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಽಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಅಧ್ಯಯನ ನಡೆಸಲು ಅಽಕಾರಿಗಳ ತಂಡವನ್ನು ಆಂಧ್ರ ಪ್ರದೇಶಕ್ಕೆ ಸರ್ಕಾರ ಕಳುಹಿಸುವ ಮೂಲಕ ಹೋರಾಟಕ್ಕೆ ಶಕ್ತಿ ತುಂಬಿದೆ.

ಆಂಧ್ರಪ್ರದೇಶದಲ್ಲಿ ಸ್ಥಳೀಯ ಭಾಷೆಯನ್ನು ಅಲ್ಲಿನ ಎರಡನೇ ಅಽಕೃತ ಭಾಷೆಯನ್ನಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಅಲ್ಲಿ ಸ್ಥಳೀಯ ಭಾಷೆಯನ್ನು ಯಾವ ಮಾನದಂಡದ ಆಧಾರದಲ್ಲಿ ಎರಡನೇ ಅಽಕೃತ ಭಾಷೆಯನ್ನಾಗಿ ಮಾಡಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಽಕಾರಿ ಹಾಗೂ ಸಿಬ್ಬಂದಿಯನ್ನು ಕಳುಹಿಸಿದೆ. ಈ ಹಿಂದೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸ್ವಂತ ಖರ್ಚಿನಿಂದ ಆಂಧ್ರಪ್ರದೇಶಕ್ಕೆ ತಂಡ ಕಳುಹಿಸಿ ಅಧ್ಯಯನ ವರದಿಯನ್ನು ಸರ್ಕಾರದ ಮುಂದೆ ಮಂಡಿಸಿದ್ದರು. ಈ ವಿಚಾರವನ್ನು ಶಾಸಕರು ಅಽವೇಶನದಲ್ಲೂ ಪ್ರಸ್ತಾಪ ಮಾಡಿದ್ದರು.

ತಂಡ ಅಧ್ಯಯನ ನಡೆಸಿ ವರದಿಯನ್ನು ಸರ್ಕಾರ ಮುಂದೆ ಇಡಲಿದ್ದು, ಇದರಿಂದ ಕರಾವಳಿಯ ಜನರ ಆಡುಬಾಷೆಯಾದ ತುಳುವನ್ನು ಕರ್ನಾಟಕದ ಎರಡನೇ ಅಽಕೃತ ಭಾಷೆಯನ್ನಾಗಿಸುವ ಹಾದಿ ಸುಗಮಗೊಳಿಸಲಿದೆ. ವಿಧಾನಸಭಾ ಅಽವೇಶನದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ತುಳುವಿನಲ್ಲೇ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಅಧ್ಯಯನ ತಂಡ ಆಂಧ್ರದಲ್ಲಿ ಸ್ಥಳೀಯ ಭಾಷೆಯನ್ನು ಯಾವ ಮಾನದಂಡದಲ್ಲಿ ಎರಡನೇ ಅಽಕೃತ ಭಾಷೆಯನ್ನಾಗಿ ಘೋಷಿಸಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಮಂಡಿಸಲಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಎಲ್ಲ ಇಲಾಖೆ ಅಽಕಾರಿಗಳಿಂದ ತಂಡ ರಚನೆ ಸಾಧ್ಯವಾಗಿದೆ. ತುಳುವನ್ನು ಎರಡನೇ ಅಽಕೃತ ಭಾಷೆಯನ್ನಾಗಿ ಮಾಡಬೇಕು ಎಂಬ ಹೋರಾಟಕ್ಕೆ ರಾಜ್ಯ ಸರ್ಕಾರದಿಂದ ಉತ್ತಮ ಬೆಂಬಲ ದೊರಕಿದಂತಾಗಿದೆ.

| ಅಶೋಕ್ ಕುಮಾರ್ ರೈ, ಶಾಸಕ ಪುತ್ತೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net