

ಕಲಾದಗಿ: ಬಾಗಲಕೋಟೆಯ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ತುಳಸಿಗೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತುಳಸಿಗೇರಿಯ ಜೆಪಿ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅನೇಕ ಕ್ರೀಡೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳು ಕಬಡ್ಡಿ, ಥ್ರೋ ಬಾಲ್‌ಗಳಲ್ಲಿ ಪ್ರಥಮ ಸ್ಥಾನವನ್ನು ಹಾಗು ವಿದ್ಯಾರ್ಥಿನಿಯರು ಥ್ರೋ ಬಾಲ್‌ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದು, ಸಾಧನೆ ಮಾಡಿದ ಕ್ರೀಡಾಳುಗಳನ್ನು ಹಾಗೂ ದೈಹಿಕ ಶಿಕ್ಷಕಿ ಎಂ.ಸಿ. ಪಿಂಜಾರ, ಟೀಮ್ ಮ್ಯಾನೇಜರ್ ಜ್ವಿ.ವಿ. ಅಂಗಡಿ ಅವರುಗಳನ್ನು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಈರಣ್ಣಾ ದಾಸಣ್ಣವರ ಮತ್ತು ಸದಸ್ಯರು, ಮುಖ್ಯಗುರುಗಳಾದ ಜಿ.ಎಚ್. ಶೇಷಪ್ಪನವರ ಮತ್ತು ಶಿಕ್ಷಕರು, ಊರಿನ ಗಣ್ಯರು ಅಭಿನಂದಿಸಿದ್ದಾರೆ.