

ಸಿದ್ದಾಪುರ: ಪಟ್ಟಣದ ಶ್ರೀ ವಿಠ್ಠಲ ರುಕುಮಾಯಿ ದೇವಾಲಯದಲ್ಲಿ ಆಷಾಢ ಶುದ್ಧ ಏಕಾದಶಿ ನಿಮಿತ್ತ ಶ್ರೀ ದೇವರಿಗೆ ಕಾಕಡಾರತಿ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ ಮತ್ತು ಅಲಂಕಾರ ಪೂಜೆ ನಡೆಯಿತು.
ಶ್ರೀ ಲಕ್ಷ್ಮೀ ವೆಂಕಟೇಶ ದೇವಾಲಯದ ಅರ್ಚಕ ವಿದ್ಯಾಧರ ಭಟ್ಟ ಸಂಗಡಿಗರು, ಶ್ರೀ ಸಂತ ಮುಕ್ತಾಬಾಯಿ ಮಹಿಳಾ ಮಂಡಳಿ, ಶ್ರೀ ಸಾಯಿ ಭಜನಾ ಮಂಡಳಿ, ನಾಮದೇವ ಯುವಕ ಮಂಡಳಿ ಹಾಗೂ ಸಮಾಜ ಬಾಂಧವರಿಂದ ಭಜನಾ ಸೇವೆ ನಡೆಯಿತು. ಸೋಮವಾರ ದ್ವಾದಶಿ ನಿಮಿತ್ತ ಶ್ರೀ ದೇವರ ಪ್ರಕಾರ ಉತ್ಸವ, ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.
ಬುಧವಾರ ಹುಣ್ಣಿಮೆ ನಿಮಿತ್ತ ಮಧ್ಯಾಹ್ನ ಗೋಪಾಲಕಾಲ ಹಾಗೂ ಸಂಜೆ ಶ್ರೀ ಸತ್ಯನಾರಾಯಣ ಪೂಜೆ ನೆರವೇರಲಿದೆ.