

ಕಾರವಾರ: ತುಳಸಿ ಗೌಡ ಅವರ ಸ್ಮಾರಕ ನಿರ್ಮಿಸುವ ಗುರಿ ಹೊಂದಿದ್ದೇವೆ ಎಂದು ವೃಕ್ಷ ಮಾತೆ ತುಳಸಿ ಗೌಡ ಫೌಂಡೇಶನ್ ಕೋಶಾಽಕಾರಿ ಮಹೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಫೌಂಡೇಶನ್ ಮೂಲಕ ಬುಡಕಟ್ಟು ಸಮುದಾಯವನ್ನು ಬಲಗೊಳಿಸುವುದು, ಗಿಡಮೂಲಿಕೆಗಳ ಸಂರಕ್ಷಣೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ನಡೆಸುವುದು ಫೌಂಡೇಶನ್ ಉದ್ದೇಶ ಎಂದು ವಿವರಿಸಿದರು.
ತುಳಸಿ ಗೌಡ ಅವರು ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಫಲಾಪೇಕ್ಷೆ ಇಲ್ಲದೆ ಈ ಚಟುವಟಿಕೆ ನಡೆಸುತ್ತಿದ್ದರು. ಪರಿಸರ ಕಾಳಜಿಯನ್ನು ಮುಂದಿನ ಪೀಳಿಗೆಗೆ ವಿಸ್ತರಿಸಲು ಕಾರ್ಯಚಟುವಟಿಕೆ ರೂಪಿಸಲು ತುಳಸಿ ಅವರ ಸಲಹೆಯಂತೆ ಅವರಿದ್ದಾಗಲೆ ಫೌಂಡೇಶನ್ ಆರಂಭಿಸಲಾಯಿತು ಈಗ ಸಂಸ್ಥೆ ಆರಂಭಗೊಂಡು ಒಂದು ವರ್ಷ ಪೂರ್ಣವಾಗಿದೆ. ಫೌಂಡೇಶನ್‌ನಿಂದ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ ಸ್ಥಾಪನೆ ಉದ್ದೇಶ ಹೊಂದಿದ್ದೇವೆ. ನರ್ಸರಿ ಆರಂಭಿಸುವ ಯೋಜನೆ ಇದೆ ಎಂದರು. ಅಧ್ಯಕ್ಷೆ ವೆಂಕಮ್ಮ ಗೌಡ, ಚಂದ್ರಹಾಸ ಗೌಡ, ಕಾರ್ಯದರ್ಶಿ ಸಂತೋಷ್, ಗಣೇಶ್, ಸೋಮಿ ಗೌಡ, ಲಂಬೋದರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.