

ಮೈಸೂರು: ಪರಿಶುದ್ಧ ಆಮ್ಲಜನಕ ನೀಡುವ ಪವಿತ್ರ ಸಸ್ಯ ತುಳಸಿ ಔಷಧಿಗಳ ಆಗರವಾಗಿದೆ. ಈ ಕಾರಣಕ್ಕಾಗಿ ನಮ್ಮ ಪೂರ್ವಜರು ತುಳಸಿಗೆ ದೇವರ ಸ್ಥಾನಮಾನ ನೀಡಿ ಪೂಜಿಸುತ್ತಾ ಬಂದಿದ್ದಾರೆ ಎಂದು ಅರ್ಚಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಹೇಳಿದರು.
ನಗರದ ಇರ್ವಿನ್ ರಸ್ತೆಯ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತುಳಸಿ ಹಬ್ಬದ ಅಂಗವಾಗಿ ತುಳಸಿ ಕಟ್ಟೆಗೆ ಪೂಜೆ ಸಲ್ಲಿಸಿ ನಂತರ ಭಕ್ತಾದಿಗಳಿಗೆ ತುಳಸಿ ಗಿಡ ವಿತರಿಸಿ ಮಾತನಾಡಿ, ಪರಿಸರದ ಮಡಿಲಿನಲ್ಲಿ ಹುಟ್ಟಿರುವ ಮನುಷ್ಯ ಇಂದು ಪರಿಸರವನ್ನು ತಾತ್ಸಾರ ಮಾಡುತ್ತಿದ್ದಾನೆ. ಆದ್ದರಿಂದಲೇ ನಾವು ಇಂದು ರೋಗಿಗಳಾಗುತ್ತಿದ್ದು, ಮಾನಸಿಕ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬರೂ ಪರಿಸರ ರಕ್ಷಣೆ ಮಾಡುವ ಜತೆಗೆ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದರು.
ಭಕ್ತಾದಿಗಳಾದ ನಾಗರಾಜಚಾರ್ಯ, ಶಶಿಕಲಾ, ರಮೇಶ್, ಪ್ರದೀಪ್, ಶೇಷಾದ್ರಿ ಹಾಗೂ ಇತರರು ಇದ್ದರು.