ಡಾ. ಮುರುಘರಾಜೇಂದ್ರ ಶ್ರೀಗಳಿಗೆ ತುಲಾಭಾರ | ಮೌನ ಅನುಷ್ಠಾನ ಮುಕ್ತಾಯ

VJP-30-2
ಹಡಗಲಿ -ಆಹೇರಿ ತಾಂಡಾ ನಂ.1 ರಲ್ಲಿ ಮುಗಳಖೋಡ -ಜಿಡಗಾಮಠದ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ತುಲಾಭಾರ ನೆರವೇರಿತು. ಸಂಜಯ ಮಹಾರಾಜ ಮತ್ತಿತರರಿದ್ದಾರೆ.
Published on

ವಿಜಯಪುರ: ತಾಲೂಕಿನ ಹಡಗಲಿ-ಆಹೇರಿ ತಾಂಡಾ ನಂ.1ರ ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಹಾಗೂ ಶ್ರೀ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ ಮಠದ ಪೂಜ್ಯ ಸಂಜಯ ಮಹಾರಾಜರ 32 ದಿನದ ಮೌನ ಅನುಷ್ಠಾನ ಮುಕ್ತಾಯ ಹಿನ್ನೆಲೆ ಮಂಗಳವಾರ ಮುಗಳಖೋಡ -ಜಿಡಗಾಮಠದ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ತುಲಾಭಾರ ನೆರವೇರಿತು.

ಬಾಲತಪಸ್ವಿ ಸೋಮಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಡಾ. ದೇವಾನಂದ ಚವಾಣ್ ಅಧ್ಯಕ್ಷತೆ ವಹಿಸಿದ್ದರು. ಜಿಗನು ಮಹಾರಾಜರು, ಗೋಪಾಲ ಮಹಾರಾಜರು, ಡಿ.ಎಲ್. ಚವಾಣ್, ಬಸವರಾಜ ಸಾಯಬಣ್ಣ ತಳವಾರ, ರಿಯಾಜ ಅಹ್ಮದ ಚಟ್ಟರಕಿ, ಬಾಪುಗೌಡ ಬಿರಾದಾರ, ಬಾವಸಿಂಗ ಜಾಧವ, ರಘುನಾಥ ರಾಠೋಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net