ಮಳೆ, ಗಾಳಿಗೆ ವೀಳ್ಯದೆಲೆ ಬೆಳೆಗೆ ಹಾನಿ

Untitled design (38)
ತುಗ್ಗಲಡೋಣಿಯಲ್ಲಿ ಶನಿವಾರ ಸಂಜೆ ಬಿಸಿದ ಮಳೆ ಗಾಳಿಗೆ ವೀಳ್ಯದೆಲೆ ಬೆಳೆ ನೆಲಕಚ್ಚಿರುವುದು.
Published on

ಹನುಮಸಾಗರ: ಸಮೀಪದ ತುಗ್ಗಲಡೊಣಿ ಗ್ರಾಮದಲ್ಲಿ ಶನಿವಾರ ಸಂಜೆ ಬಿಸಿದ ಮಳೆಗಾಳಿಗೆ ವೀಳ್ಯದೆಲೆ ತೋಟ ನೆಲಕಚ್ಚಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ. ತುಗ್ಗಲಡೋಣಿ ಗ್ರಾಮದ ರೈತರಾದ ದ್ಯಾಮಣ್ಣ ಭೀಮಪ್ಪ ಬಾವಂಜಿ, ಹನುಮಪ್ಪ ಭೀಮಪ್ಪ ಭಾವಂಜಿ ಅವರ ತಲಾ ಒಂದು ಎಕರೆ ಬೆಳೆ ಹಾನಿಯಾಗಿದೆ. ಕಟಾವಿಗೆ ಬಂದಿದ್ದ ವೀಳ್ಯದೆಲೆ ನೆಲಕಚ್ಚಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ. ಹನುಮಸಾಗರ, ತುಮರಿಕೊಪ್ಪ, ಯರಗೇರಾ, ಕುಂಬಳಾವತಿ, ಪರಮಣಹಟ್ಟಿ ಸೇರಿ ವಿವಿಧ ಗ್ರಾಮಗಳಲ್ಲಿ ವೀಳ್ಯೆದೆಲೆ, ಬಾಳೆ, ನುಗ್ಗೆ ಗಿಡಗಳು ಹಾನಿಯಾಗಿವೆ. ತೋಟಗಾರಿಗೆ ಇಲಾಖೆ ರೈತರ ಸಹಾಯಕ್ಕೆ ಬರಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net