

ಹುಬ್ಬಳ್ಳಿ: ಕುಂದಗೋಳದ ತಾಲೂಕು ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾ ಕ್ಷಯರೋಗ ನಿಮೂಲನಾ ಅಧಿಕಾರಿಗಳ ಕಚೇರಿ ಮತ್ತು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ಟೌನ್ ವತಿಯಿಂದ ಕ್ಷಯರೋಗ ಪತ್ತೆ ಶಿಬಿರ ನಡೆಸಲಾಯಿತು.
ಸರ್ಕಾರದ 100 ದಿನಗಳ ಕ್ಷಯರೋಗ ನಿಮೂಲನ ದಿನದ ಅಂಗವಾಗಿ ಏರ್ಪಡಿಸಿದ್ದ ಶಿಬಿರದಲ್ಲಿ ಸುಮಾರು 250 ಜನರನ್ನು ತಪಾಸಣೆ ಮಾಡಿ, ಉಚಿತ ಔಷಧಿ ಹಾಗೂ ಕ್ಷಯರೋಗದ ಬಗ್ಗೆ ಮಾಹಿತಿ ನೀಡಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ. ಸೋಫಿಯಾ, ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ಆರೋಗ್ಯಾಧಿಕಾರಿ ಡಾ. ಮಹೇಂದ್ರ, ತಾಲೂಕು ಆರೋಗ್ಯ ನಿರೀಕ್ಷಕ ವೀರೇಶ, ಕಿಮ್್ಸ ಮಕ್ಕಳ ತಜ್ಞ ಡಾ. ಶಿವಾನಂದ, ಶ್ವಾಸಕೋಶ ತಜ್ಞ ಡಾ. ಅಶೋಕ ಗುಡಗುಂಟಿ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ, ಕಾರ್ಯದರ್ಶಿ ಪ್ರವೀಣ ಬನ್ಸಾಲಿ, ಮಾಜಿ ಅಧ್ಯಕ್ಷ ಕೌಸ್ತುಭ ಸಂಶೀಕರ ಹಾಗೂ ಇತರರು ಉಪಸ್ಥಿತರಿದ್ದರು.