ಕ್ಷಯರೋಗ ತಪಾಸಣಾ ಶಿಬಿರ

ctd 23 vishvamanava
Published on

ಚಿತ್ರದುರ್ಗ: ಸೀಬಾರ-ಗುತ್ತಿನಾಡು ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ರಜತ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಸ್ಥೆ ಆವರಣದಲ್ಲಿ ಕ್ಷಯರೋಗ ತಪಾಸಣಾ ಶಿಬಿರ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ಮುಖ್ಯಶಿಕ್ಷಕ ಬಿ.ಜಿ.ಶಿವರುದ್ರಪ್ಪ, ಸಂಸ್ಥೆ ಅಧ್ಯಕ್ಷ ಜಲೀಲ್‌ಸಾಬ್, ಕಾರ‌್ಯದರ್ಶಿ ನೀಲಕಂಠದೇವ, ಡಾ.ಸಚಿನ್, ಡಾ.ಪ್ರಶಾಂತ್, ಡಾ.ಹಿಮಬಿಂದು, ಪ್ರಾಚಾರ‌್ಯೆ ಎಚ್.ಆರ್.ಸುಧಾ, ಯತೀಶ್, ಮಹೇಂದ್ರ, ನಂದನ್, ರಮೇಶ್, ಮಾರುತಿ, ಎನ್.ತಿಪ್ಪೇಸ್ವಾಮಿ, ಎಂ.ಪ್ರಸಾದ್, ಹನುಮರಾಜ್ ಮತ್ತಿತರರು ಇದ್ದರು.

ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಕ್ಯಾಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ, ಎಸ್‌ಜೆಎಂ ದಂತ ಕಾಲೇಜು ಹಾಗೂ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರದ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net