ಉಳ್ಳಾಲದಲ್ಲಿ ಕ್ಷಯರೋಗ ಜಾಗೃತಿ ಬೀದಿನಾಟಕ

Ull_Street Play
Published on

ಉಳ್ಳಾಲ: ಸಮುದಾಯ ಆರೋಗ್ಯ ಕೇಂದ್ರ, ಉಳ್ಳಾಲ ತಾಲೂಕು ಆಯುಷ್ ಘಟಕ, ತಲಪಾಡಿ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಕ್ಷಯ ರೋಗ ಬಗ್ಗೆ ಜಾಗೃತಿ ಮೂಡಿಸಲು ನಿ-ಕ್ಷಯ ಬೀದಿ ನಾಟಕ ಉಳ್ಳಾಲ ನಗರಸಭೆ ಬಸ್ ನಿಲ್ದಾಣದ ಬಳಿ ಇತ್ತೀಚೆಗೆ ನಡೆಯಿತು.

ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವೈದ್ಯಕೀಯ ವಿದಾರ್ಥಿಗಳು ಬೀದಿ ನಾಟಕ ನಡೆಸಿಕೊಟ್ಟರು.

ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಸಲ್ದಾನ, ನಗರಸಭೆ ಸದಸ್ಯ ಜಬ್ಬಾರ್, ಪ್ರಕೃತಿ ಮತ್ತು ಯೋಗ ಚಿಕಿತ್ಸಾ ವಿಭಾಗದ ಡಾ.ವಸಂತ್, ಆಯುಷ್ ವೈದ್ಯಾಧಿಕಾರಿ ಡಾ.ಸಹನಾ, ಕಾರ್ಯಕ್ರಮ ಯೋಜನಾಧಿಕಾರಿ ಲಲಿತಾ, ಉಳ್ಳಾಲ ಆಟೋರಿಕ್ಷಾ ಮಾಲೀಕರ ಸಂಘದ ಅಧ್ಯಕ್ಷ ಫ್ರಾನ್ಸಿಸ್, ವೈದ್ಯಾಧಿಕಾರಿ ಡಾ.ವಸಂತ್, ಶಾರದಾ ಆಯುರ್ವೇದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ನಿಧಿನ್, ಸರ್ಕಾರಿ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net