

ವಿಜಯವಾಣಿ ಸುದ್ದಿಜಾಲ ತೂಬಗೆರೆ
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಹಾಡೋನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಸಭೆ ಸಂಘದ ಅಧ್ಯಕ್ಷ ಮುನೇಗೌಡ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದಲ್ಲಿ ಇರುವವರೆಗೂ 334 ಜನ ರೈತರಿಗೆ 2.68 ಕೋಟಿ ರೂಪಾಯಿ ಬೆಳೆ ಸಾಲ ನೀಡಿದ್ದೇವೆ, 92 ರೈತರಿಗೆ 74 ಲಕ್ಷ ರೂಪಾಯಿ ಸಾಲ ಮಂಜೂರಾತಿ ಪ್ರಸ್ತಾವನೆ ಕಳಿಸಿದ್ದೇವೆ, ಸಂಘಕ್ಕೆ 10 ಗುಂಟೆ ಜಾಗ ಮಂಜೂರಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ, ಮುಂದಿನ ದಿನಗಳಲ್ಲಿ ಎಷ್ಟೇ ಜನ ರೈತರು ಬಂದರೂ ಸಂಘದಿಂದ ಸಾಲ ನೀಡಲಾಗುವುದು ಎಂದು ಅಧ್ಯಕ್ಷ ಮುನೇಗೌಡ ತಿಳಿಸಿದರು.
ಬಿ.ಡಿ.ಸಿ.ಸಿ ಬ್ಯಾಂಕ್ ಮೇಲ್ವಿಚಾರಕ ನಾಯಕ್.ಆರ್.ರಂಗಸ್ವಾಮಿ ಮಾತನಾಡಿ, ಹಾಡೋನಹಳ್ಳಿ ಸಂಘದ ವ್ಯಾಪ್ತಿಗೆ ಬರುವ ಸೀಶಕ್ತಿ ಸಂಘಗಳಿಗೆ 5 ಲಕ್ಷ ರೂಪಾಯಿವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲ ನೀಡಲಾಗುವುದು ಎಂದರು.
ನಿರ್ದೇಶಕ ಶ್ರೀಧರ್, ಪಿಳ್ಳಪ್ಪ, ಎಚ್.ಎನ್.ಹನುಮಂತರಾಯಪ್ಪ, ಎನ್.ಮುನಿರಾಜು, ವಿ.ವೆಂಕಟೇಶ್, ನಂಜೇಗೌಡ, ಅನಸೂಯಮ್ಮ, ಗಂಗಲಕ್ಷ್ಮಮ್ಮ, ರಾಮನಾಯಕ್, ಲೋಕನಾಥ್, ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಜಿ.ಎಂ.ಸಂಜಯ್ ಇದ್ದರು.