ಉಚಿತ ಶಿಬಿರದಿಂದ ಕೃಷಿಕರಿಗೆ ವರ

Tuabge2
Published on

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಮನುಷ್ಯನಿಗೆ ಆರೋಗ್ಯವೇ ಮುಖ್ಯ. ಆರೋಗ್ಯವಿಲ್ಲದೆ, ಜೀವನ ನಡೆಸಲು ಆಗುವುದಿಲ್ಲ ಎಂದು ಸುಮನಾ ಫೌಂಡೇಶನ್ ಅಧ್ಯಕ್ಷೆ ಸುನೀತಾ ಮಂಜುನಾಥ್ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಮೇಳೆಕೋಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಮಯ್ಯ ವೈದ್ಯಕೀಯ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮಿಣ ಭಾಗದ ಜನರು, ಹೆಚ್ಚು ಕೃಷಿಯಲ್ಲಿ ತೊಡಗಿರುವುದರಿಂದ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದರೆ, ಅವರು ಆಸ್ಪತ್ರೆಗೆ ಹೋಗಿ ತಪಾಸಣೆ ನಡೆಸುವುದು ಕಷ್ಟವಾಗುತ್ತದೆ. ಆದ್ದರಿಂದ ಕೃಷಿಯಲ್ಲಿ ತೊಡಗಿದವರ ಬಳಿಗೆ ನಾವೇ ಗ್ರಾಮೀಣ ಭಾಗಕ್ಕೆ ತೆರಳಿ, ಉಚಿತ ಆರೋಗ್ಯ ತಪಾಸಣೆ ಮಾಡುತ್ತಿದ್ದೇವೆ. ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಶಿಬಿರದ ಮಾಹಿತಿ ನೀಡಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುತ್ತದೆ. ಯಾವುದೇ ಹಣ ತೆಗೆದುಕೊಳ್ಳದೆ ಉಚಿತವಾಗಿ ಔಷಧ, ಅಗತ್ಯ ಇದ್ದರೆ ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗುತ್ತದೆ ಎಂದರು.
ವೈದ್ಯ ಲಕ್ಷ್ಮೀನಾರಾಯಣ ಮಾತನಾಡಿ, 10 ವರ್ಷಗಳಿಂದ ಸುಮನಾ ಫೌಂಡೇಶನ್ ರಾಮಯ್ಯ ಆಸ್ಪತ್ರೆಯ ಜತೆ ಕೈ ಜೋಡಿಸಿ, ಉಚಿತ ಆರೋಗ್ಯ ಶಿಬಿರಗಳನ್ನು ಮಾಡುತ್ತಿದ್ದಾರೆ. ಆರ್ಥಿಕವಾಗಿ ಜನರು ಹಿಂದುಳಿದಿದ್ದಾರೆ ಎಂಬ ಉದ್ದೇಶದಿಂದ ಮೇಳೆಕೋಟೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದಾರೆ. ಹೆಚ್ಚಿನ ಚಿಕಿತ್ಸೆ ಅವಶ್ಯಕವಿದ್ದರೆ ಶೇ.70 ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಕೇವಲ ಔಷಧಕ್ಕೆ ಹಣ ಖರ್ಚು ಮಾಡಿದರೆ ಸಾಕು ಎಂದರು.
ಜತೆಗೆ ಸರ್ಕಾರಿ ಸ್ಕೀಂ ಅಡಿ, ನಾವು ಉಚಿತವಾಗಿ ಚಿಕಿತ್ಸೆ ನೀಡುತ್ತೇವೆ. ಇನ್ನೂ ಈ ಕ್ಯಾಂಪ್‌ನಲ್ಲಿ 13 ವಿಭಾಗದ ವೈದ್ಯರಿದ್ದು, ಉಚಿತವಾಗಿ ತಪಾಸಣೆ ಮಾಡಿ, 15 ದಿವಸಕ್ಕೆ ಬಳಕೆಯಾಗುವಂತಹ ಔಷಧ ನೀಡುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net