ಘಾಟಿ ಕ್ಷೇತ್ರದಲ್ಲಿ 71 ಲಕ್ಷ ರೂ. ಕಾಣಿಕೆ ಸಂಗ್ರಹ

gaati money
Published on

ತೂಬಗೆರೆ: ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಕ್ಷೇತ್ರ ತೂಬಗೆರೆ ಹೋಬಳಿಯ ಘಾಟಿ ಕ್ಷೇತ್ರದಲ್ಲಿ ಹುಂಡಿ ಎಣಿಕೆ ಮಾಡಲಾಗಿದ್ದು, ಒಟ್ಟು 71.47.234 ರೂ. ಹಾಗೂ 2 ಕೆಜಿ 630 ಗ್ರಾಂ ಬೆಳ್ಳಿ, 1.ಗ್ರಾಂ ಚಿನ್ನ ಸಂಗ್ರವಾಗಿದೆ.
ಜುಲೈ 17ರಿಂದ ಸೆ.11ರವರೆಗೆ ಸಂಗ್ರಹವಾಗಿರುವ ಕಾಣಿಕೆಯಾಗಿದೆ.
ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ, ಮುಜರಾಯಿ ಇಲಾಖೆ ಜಿಲ್ಲಾ ಸಹಾಯಕ ಜೆ.ಜೆ.ಹೇಮಾವತಿ, ಪ್ರಧಾನ ಆರ್ಚಕ ನಾಗೇಂದ್ರಶರ್ಮ, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಪೊಲೀಸ್, ಹಾಗೂ ದೇವಾಲಯದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net