

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಹೋಬಳಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಸಮೀಪದ ದೇವರಬೆಟ್ಟದಲ್ಲಿ ಶನೇಶ್ಚರ ಸ್ವಾಮಿ ಜಯಂತಿ ಅಂಗವಾಗಿ 19ನೇ ಕಲ್ಯಾಣೋತ್ಸವ, ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿತು.
ದೇವಾಲಯದ ಸಂಸ್ಥಾಪಕ ಶ್ರೀಧರ್ ಶರ್ಮಾ ಗುರೂಜಿ ಹಾಗೂ ತೂಬಗೆರೆಯ ಚಿದಾನಂದ ಶಾಸ್ತ್ರಿ ನೇತೃತ್ವದಲ್ಲಿ ಬೆಳಗ್ಗೆಯಿಂದ ವಿವಿಧ ಪೂಜಾ ಕಾರ್ಯಕ್ರಮ, ಕಲ್ಯಾಣೋತ್ಸವ, ಪ್ರಾಕಾರೋತ್ಸವ ಹಮ್ಮಿಕೊಳ್ಳಲಾಗಿತ್ತು.
ಜಾತ್ರೆ ಅಂಗವಾಗಿ ಹಗಲು ಪರಿಷೆ, ಶನೇಶ್ಚರ ಶಾಂತಿ ಹೋಮ, ಅಭಿಷೇಕ, ತೋಮಾಲೆಸೇವೆ, ನಕ್ಷತ್ರ ರಾಶಿಗಳ ಹಾಗೂ ಸಂವತ್ಸರಗಳ ದೋಷ ನಿವಾರಣೆ, ಪೂರ್ಣಾಹುತಿ, ಶೇಷವಾಹನೋತ್ಸವ ಹಾಗೂ
ಸಂಜೆ ವಸಂತೋತ್ಸವ, ಉಯ್ಯಲೋತ್ಸವ ಹಾಗೂ ಶಯಾನೋತ್ಸವ ಕಾರ್ಯಕ್ರಮ ನೆರವೇರಿಸಲಾಯಿತು. ನೂರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ಬ್ರಹ್ಮರಥೋತ್ಸವದ ಬಳಿಕ ಅನ್ನಪ್ರಸಾದ ವ್ಯವಸ್ಥೆ ಮಾಡಲಾಯಿತು,