ಟೈರ್ ಸ್ಫೋಟಗೊಂಡು ಟೆಂಪೋ ಪಲ್ಟಿ

accident
Published on

ತೂಬಗೆರೆ: ಹೋಬಳಿಯ ನಾಯಕರಂಡನಹಳ್ಳಿ ಗೇಟ್ ಬಳಿ ಅಡುಗೆ ಎಣ್ಣೆ ಸಾಗಿಸುತ್ತಿದ್ದ ಟೆಂಪೋ ಟೈರ್ ಸ್ಫೋಟಗೊಂಡು ಸ್ತೆಯಲ್ಲೇ ಪಲ್ಟಿಯಾಗಿದೆ. ಅದೃಷ್ಟವಶಾತ್ ಪ್ರಾಣ ಹಾನಿಯಾಗಿಲ್ಲ.
ಬೆಂಗಳೂರಿನಿಂದ- ಗೌರಿಬಿದನೂರು ಕಡೆಗೆ ಹೋಗುವ ವೇಳೆ ಅಪಘಡ ಸಂಭವಿಸಿದೆ. ಟೆಂಪೋದಲ್ಲಿ ಸುಮಾರು ಮೂರು ಸಾವಿರ ಲೀಟರ್ ಅಡುಗೆ ಎಣ್ಣೆ ಪೊಟ್ಟಣ ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು, ಬದಲಿ ವಾಹನದಲ್ಲಿ ಎಣ್ಣೆ ಪೊಟ್ಟಣಗಳನ್ನು ಕೊಂಡೊಯ್ಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net